ಮಡಂತ್ಯಾರು 37ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ: ಸೆ.5ರಂದು ಮೊಸರು ಕುಡಿಕೆ ಉತ್ಸವ

0

ಬೆಳ್ತಂಗಡಿ: ಮಡಂತ್ಯಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 37ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಸೆ.5ರಂದು ಮಡಂತ್ಯಾರು ಗಣಪತಿ ಮಂಟಪದ ಸಿಂಧೂರ ವೇದಿಕೆಯಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪ್ರಶಾಂತ್ ಎಂ. ಪಾರೆಂಕಿ ತಿಳಿಸಿದ್ದಾರೆ.ಉತ್ಸವವನ್ನು ಪುಂಜಾಲಕಟ್ಟೆ ಅಕ್ಷಯ ಫುಡ್ಸ್ ಮಾಲಕ ಜಿ ವಾಸುದೇವ ಗೌಡ ಉದ್ಘಾಟಿಸಲಿದ್ದಾರೆ.

ಸಕಲೇಶಪುರ ಹಾನ್‌ಬಾಳ್ ಚಿಕ್ಕಿ ಸಂಸ್ಥೆಯ ಮಾಲಕ ರವಿತೇಜ ಅಧ್ಯಕ್ಷತೆ ವಹಿಸಲಿದ್ದಾರೆ.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಅಡಿಕೆ ವರ್ತಕರ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಕರ್ನಾಟಕಸೋಸಿಯೇಷನ್ ರಾಜ್ಯ ಟೈಲರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸುರೇಶ್ ಸಾಲ್ಯಾನ್, ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷ ಬಿ. ಪದ್ಮನಾಭಸುವರ್ಣ, ಸ್ಥಾಪಕ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ, ಕೋಶಾಧಿಕಾರಿ ನಿಖಿಲ್ ಕುಮಾರ್ ದೋಟ, ಕಾರ್ಯದರ್ಶಿ ಶರತ್ ಗೌಡ ಹಟ್ಟತೋಡಿ ಉಪಸ್ಥಿತರಿರಲಿದ್ದಾರೆ.

ದಿನಪೂರ್ತಿ ಸ್ಪರ್ಧೆ,ಸಂಭ್ರಮ: ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ, ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ, ಸಾಧಕರಿಗೆ ಸನ್ಮಾನ, ಕಾರ್ಯಕ್ರಮದ ರೀಲ್ಸ್ ಸ್ಪರ್ಧೆ, ಬೈಕ್ ರೇಸ್ ಸ್ಪರ್ಧೆ, ಗೋವಿಂದ ಸ್ಪರ್ಧೆ, ಶ್ರೀಕೃಷ್ಣನ ವೈಭವದ ಮೆರವಣಿಗೆ ಹಾಗೂ ಸಂಜೆ 8 ಗಂಟೆಗೆ ಮಕ್ಕಳ ಯಕ್ಷಗಾನ – ಶ್ರೀ ಕೃಷ್ಣ ಲೀಲೆ ನಡೆಯಲಿದೆ.

LEAVE A REPLY

Please enter your comment!
Please enter your name here