ತಾಲ್ಲೂಕು ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾಟ: ಸಂತ ತೆರೇಸಾ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆ, ಬೆಳ್ತಂಗಡಿ ಇಲ್ಲಿ ನಡೆದ ತಾಲ್ಲೂಕು ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾಟದಲ್ಲಿ ಸಂತ ತೆರೇಸಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪಂದ್ಯಾಟದಲ್ಲಿ ಅಂಡರ್–14 ಬಾಲಕಿಯರ ತಂಡವು ವಿಜೇತರಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅಂಡರ್–17 ಬಾಲಕರ ತಂಡವು ರನ್ನರ್ಸ್‌ಅಪ್ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿತು.

ವೈಯಕ್ತಿಕ ವಿಭಾಗದಲ್ಲಿಯೂ ಸಂತ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳು ಮಿಂಚಿದರು. ಅತ್ಯುತ್ತಮ ಶೂಟರ್ ಪ್ರಶಸ್ತಿಯನ್ನು ದೀಕ್ಷಿತ್ ಹಾಗೂ ಏಂಜಲ್ ಜಾಸ್ಮಿನ್ ಪಿಂಟೋ ಪಡೆದುಕೊಂಡರೆ, ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು ಸಾನ್ವಿಕಾ ಕೆ.ಪಿ. ತಮ್ಮದಾಗಿಸಿಕೊಂಡರು.ವಿದ್ಯಾರ್ಥಿಗಳ ಈ ಸಾಧನೆಗೆ ಸಂತ ತೆರೇಸಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಂಸ್ಥೆಯ ಪ್ರಯತ್ನಕ್ಕೆ ಈ ಸಾಧನೆ ಮತ್ತಷ್ಟು ಮೆರುಗು ತಂದಿದೆ.

LEAVE A REPLY

Please enter your comment!
Please enter your name here