ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಬೆಳ್ತಂಗಡಿಯ ಶ್ರೀಧರ್ ಮಡಿವಾಳರಿಂದ 50 ಸಾವಿರ ಮೌಲ್ಯದ ದಳಿದೀಪ ಸಮರ್ಪಣೆ

0

*ಮಂಗಳೂರು: ಬೆಳ್ತಂಗಡಿ ತಾಲೂಕು ಮಡಿವಾಳ ಸಂಘದ ಅಧ್ಯಕ್ಷರು, ಭಾರತೀಯ ಜನತಾ ಪಕ್ಷದ ಕಲ್ಮಂಜ 88ನೇ ಬೂತ್ ಸಮಿತಿ ಅಧ್ಯಕ್ಷರು, ಸತ್ಯನಾರಾಯಣ ಭಜನಾ ಮಂದಿರದ ಸಕ್ರಿಯ ಕಾರ್ಯಕರ್ತರು, ಸಮಾಜ ಸೇವಕರು, ಕೊಡುಗೈ ದಾನಿ ಹಾಗೂ ಪ್ರಖ್ಯಾತ ತಾಮ್ರ ಶಿಲ್ಪಿಗಳಾದ ಶ್ರೀಧರ್ ಮಡಿವಾಳ ಇವರು ತಮ್ಮ ಸ್ವಹಸ್ತದಿಂದ ತಯಾರಿಸಿದ ಸುಮಾರು 50,000 ರೂ. ಬೆಲೆಬಾಳುವ ರಂಗಪೂಜೆಯ ದಳಿದೀಪ (ದೀಪದ ಸಾಲು)* ವನ್ನು ಕದ್ರಿ ಮಹತೋಭಾರ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಶ್ರೀಧರ್ ಮಡಿವಾಳ ಅವರನ್ನು ಶಾಲು ಹೊದಿಸಿ ಗೌರವಿಸಿ, ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.

ದೇವಸ್ಥಾನದಲ್ಲಿ ದೀಪ ಬೆಳಗಿಸುವ ಮೂಲಕ ದೀಪ ಸಮರ್ಪಣಾ ಕಾರ್ಯಕ್ರಮ ನೆರವೇರಿತು.ಶ್ರೀಧರ್ ಮಡಿವಾಳ ಅವರ ಈ ಧಾರ್ಮಿಕ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here