






ಕಾಶಿಪಟ್ಣ:ಕಾಶಿಪಟ್ಣ ಅಂಗನವಾಡಿ ಕೇಂದ್ರದಲ್ಲಿ ಸುಮಾರು 42 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿ, ಅದೆಷ್ಟೋ ಮಕ್ಕಳ ಮಾತೃಸ್ವರೂಪಿಯಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ವಿಶಿಷ್ಠ ಸೇವೆ ಗೈದಿರುವ ಅಂಗನವಾಡಿ ಶಿಕ್ಷಕಿ ಸುಮಿತ್ರಾ ಅವರು ಆಗಸ್ಟ್ 31, 2026ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.


ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ಅವರಿಗೆ ಸಾಂಕೇತಿಕವಾಗಿ ಬೀಳ್ಕೊಡುಗೆ ನೀಡಲಾಯಿತು.ದೀರ್ಘ ನಾಲ್ಕು ದಶಕಗಳಿಗೂ ಅಧಿಕ ಕಾಲ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಬುನಾದಿ ಹಾಕಿ, ಶೈಕ್ಷಣಿಕವಾಗಿ ಸದೃಢ ಪಂಚಾಂಗವನ್ನು ರಚಿಸಿದ ಇವರ ಸೇವೆಯನ್ನು ಊರಿನ ಹಿರಿಯರು, ಶಿಕ್ಷಣಾಭಿಮಾನಿಗಳು ಹಾಗೂ ಪೋಷಕರು ಈ ವೇಳೆ ಸ್ಮರಿಸಿದರು.
ಸುಮಿತ್ರಾ ಅವರ ಮುಂದಿನ ನಿವೃತ್ತಿ ಜೀವನವು ಸುಖ, ಸಂತೋಷ, ನೆಮ್ಮದಿ ಹಾಗೂ ಆರೋಗ್ಯಪೂರ್ಣವಾಗಿರಲಿ ಎಂದು ಎಲ್ಲರೂ ಹಾರೈಸಿದರು.









