






ಶ್ರೀ ಕೃಷ್ಣ ಆಸ್ಪತ್ರೆ,ಕಕ್ಕಿಂಜೆ – ಬೆಳ್ತಂಗಡಿ ತಾಲೂಕು,ದ ಕ.”ಶ್ರೀ ಕೃಷ್ಣ ಹೆಲ್ತ್ ಸೆಂಟರ್, ಕಾಯರ್ತಡ್ಕಕೆ.ಎಂ.ಸಿ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗ-ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇವರ ಸಂಯುಕ್ತ ಆಶ್ರಯದಲ್ಲಿ,ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ “ಪ್ರಥಮ ಚಿಕಿತ್ಸೆ (First Aid,Basic Life Support) ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರವು ಆ. 31 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ತುರ್ತು ಸಂದರ್ಭಗಳಲ್ಲಿ ಹಾಗೂ ಇನ್ನಿತರ ಆನಾರೋಗ್ಯ ಅಥವಾ ಅನಾಹುತಗಳು ಸಂಭವಿಸುವ ಸಮಯದಲ್ಲಿ ಜೀವ ಉಳಿಸಲು ಧೈರ್ಯದಿಂದ ಹಾಗೂ ಎದೆಗುಂದದೆ ಪ್ರಥಮ ಚಿಕಿತ್ಸೆ ನೀಡಬೇಕು. ಹೃದಯಾಘಾತ,ಪಾರ್ಶ್ವವಾಯು,ನೀರಿನಲ್ಲಿ ಮುಳುಗುವುದು, ಅಗ್ನಿ ಅವಘಡ ಹಾಗೂ ಅಪಘಾತಗಳು/ಆಘಾತ, ಹಾವು ಕಡಿತ, ನಾಯಿ ಕಡಿತ, ವಿದ್ಯುತ್ ಆಘಾತ ಮತ್ತು ಸುಟ್ಟಗಾಯಗಳು, ಸಿಡಿಲು/ಮಿಂಚು,ರಕ್ತಸ್ರಾವದ ಗಾಯಗಳು ಮುಂತಾದ ಸಂದರ್ಭಗಳಲ್ಲಿ ಪ್ರತಿಯೊಬ್ಬ ಏನು ಮಾಡಬೇಕು ಮತ್ತು ಏನು ತಪ್ಪು ಮಾಡಬಾರದು ಎಂಬುದರ ಬಗ್ಗೆ ಇನ್ನಿತರ ತುರ್ತು ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು.


ಹೃದಯ ಸ್ತಂಭನ ಸಂದರ್ಭದಲ್ಲಿ CPR ಕೊಡುವುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನಡೆಸಿಕೊಟ್ಟರು. ವೈದ್ಯಕೀಯ ತುರ್ತು ಪರಿಸ್ಥಿತಿಗಳು ಮತ್ತು ವಿಪತ್ತುಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ರೋಗಿಗಳನ್ನು ಅಥವಾ ಸಂತ್ರಸ್ತರನ್ನು ನಿಭಾಯಿಸಲು ಕನಿಷ್ಠ ಮೂಲಭೂತ ಜ್ಞಾನ ಅತ್ಯಗತ್ಯ, ಜೀವ ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ ಸಾಮಾಜಿಕ ಕಳಕಳಿ ಇರುವವರು ಯಾರು ಬೇಕಾದರೂ ಈ ಕಾರ್ಯವನ್ನು ಮಾಡಬಹುದು. ಮುಖ್ಯವಾಗಿ ವಿದ್ಯಾರ್ಥಿಗಳು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ ಮುಖ್ಯಶಿಕ್ಷಕ ಯಾಕುಬ್, ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು,ಕೆಎಂಸಿ ತುರ್ತು ಚಿಕಿತ್ಸಾ ವಿಭಾಗದ ಸಿಬ್ಬಂದಿ ಬಾಲಾಜಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್,ಕಾಯರ್ತಡ್ಕ ಇಲ್ಲಿನ ಅನಿಶ್ ಕೃಷ್ಣ ಇರ್ವತ್ರಾಯ,ಕೆ ಎಂ ಸಿ ಜನಸಂಪರ್ಕಾಧಿಕಾರಿ ಸುಪ್ರೀತಾ, ಶ್ರೀ ಕೃಷ್ಣ ಆಸ್ಪತ್ರೆಯ ಸಿಬ್ಬಂದಿ ಗಣೀಶ್. ಬಿ, ಜಿಲ್ಸನ್ ಮ್ಯಾಥ್ಯೂ ಮೊದಲಾದವರು ಉಪಸ್ಥಿತರಿದ್ದರು.









