ಪದ್ಮುಂಜ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ಒಟ್ಟು ವ್ಯವಹಾರ 244313363.70 ವ್ಯವಹಾರ 3091169.89 ನಿವ್ವಳ ಲಾಭ ಶೇ. 22 ಡೆವಿಡೆಂಡ್ 1.21ಪೈಸೆ ಬೋನಸ್.

ಪದ್ಮುಂಜ: ಹಾಲು ಉತ್ಪಾದಕರ ಸಹಕಾರಿ ಸಂಘದ 2025/26 ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಅವರ ಅಧ್ಯಕ್ಷತೆಯಲ್ಲಿ ಅ 31ರಂದು ಸಂಘದ ಸಭಾಂಗಣದಲ್ಲಿ ಜರಗಿತು. ಉಪಾಧ್ಯಕ್ಷ ಉಮೇಶ್ ಗೌಡ, ನಿರ್ದೇಶಕರಾದ ಶೀನಪ್ಪ ಗೌಡ, ರಾಜೇಶ್ ಎ, ಕರಿಯಪ್ಪ, ಪುರುಷೋತ್ತಮ ಗೌಡ, ಉಮೇಶ್ ಪೂಜಾರಿ, ರಮಾನಂದ ಎಂ., ಶಾರದಾ ಆರ್ ಗೌಡ, ಪ್ರತಿಮಾ, ಕೃಷ್ಣ ನಾಯ್ಕ, ಸುನಿಲ್ ಕುಮಾರ್, ಮಾಲತಿ, ಪದನಿಮಿತ್ತ ಸದಸ್ಯರು ಉಪಸ್ಥಿತರಿದ್ದರು.

ಸಂಘಕ್ಕೆ ಹಾಲು ಹಾಕದೇ ಇರವ ಸದಸ್ಯರನ್ನು ಸಂಘದಿಂದ ಬಿಡಬೇಕೆಂಬ ಸೀತಾರಾಮ ಮಡಿವಾಳರವರು ಸೂಚಿಸಿದ್ದು ಈ ಬಗ್ಗೆ ಉತ್ತರಿಸಿದ ಉಪ ವ್ಯವಸ್ಥಾಪಕ ಡಾ. ‌ಸತೀಶ್ ರಾವ್ ರವರು ಸಂಘಕ್ಕೆ ಹಾಲು ಹಾಕದೇ ಇರವ ಸದಸ್ಯರನ್ನು ನೋಟೀಸ್ ನೀಡಿ ಸಂಘದಿಂದ ಅಮಾನತು ಇಡಬಹುದು ಎಂದರು. ನಿವ್ರತ ಕಾರ್ಯದರ್ಶಿ ಜಯರಾಮ ಶೆಟ್ಟಿ ಯವರು ಮಾತನಾಡಿ ಹಾಲು ಖರೀದಿ ಮಾಡಲು ಮನೆ ಮನೆಗೆ ವಾಹನದ ವ್ಯವಸ್ಥೆ ಸಂಘದ ವತಿಯಿಂದ ಕಲ್ಪಿಸುವುದು ಉತ್ತಮ ಎಂದು ಸಲಹೆ ನೀಡಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧ್ಯಕ್ಷರು ಉತ್ತರಿಸಿದರು.

ಸಂಘದ ಕಾರ್ಯದರ್ಶಿ ಎಂ ಸತೀಶ ಕುಮಾರ್ ರವರು ಸಭೆಯ ನೋಟೀಸು ಹಾಗೂ ವಾರ್ಷಿಕ ವರದಿ ಓದಿ ಹೇಳಿದರು. ಸಿಬ್ಬಂದಿ ಹೇಮಲತಾ ಪಿ.ರವರು 01/04/2025ರಿಂರ 31/03/26 ರ ವರೆಗಿನ ಜಮಾ ಖರ್ಚು ತಖ್ತೆ ಓದಿ ಹೇಳಿದರು. ಉಪ ವ್ಯವಸ್ಥಾಪಕ ಡಾ ‌ಸತೀಶ್ ರಾವ್ ರವರು ಮಾತನಾಡಿ ಆದಷ್ಟು ಹೆಣ್ಣು ಕರುಗಳ ಇಂಡೆಕ್ಷನ್ ಕೊಡಿಸುವುದರ ಮೂಲಕ ಹೊರಿಗಳ ಸಂತಾನ ಕಡಿಮೆಯಾಗುವಂತೆ ಪ್ರಯತ್ನಿಸಬೇಕು ಎಂದರು. ಸಂಘದ ಪ್ರಗತಿ ಪತ್ರವನ್ನು ಓದಿದ ಕಾರ್ಯದರ್ಶಿ ಎಂ. ಸತೀಶ ಕುಮಾರ್ ರವರು ಪ್ರಸ್ತುತ ಸಂಘವು ಕಣಿಯೂರು, ಬಂದಾರು, ಮೊಗ್ರು, ಉರುವಾಲು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ಕಣಿಯೂರು, ಬಂದಾರು, ಮೊಗ್ರು ಉರುವಾಲು ಗ್ರಾಮಗಳಲ್ಲಿ ಒಂದೊಂದು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪನೆಯಾಗಿದೆ.

ಈ ಸಂಘಗಳ ಸ್ಥಾಪನೆಯ ಹೊರತಾಗಿಯೂ ಸಂಘವು 2025-26 ನೇ ಸಾಲಿನಲ್ಲಿ 1219340.0 ಲೀಟರ್ ಹಾಲನ್ನು ಸಂಗ್ರಹಣೆ ಮಾಡಿದೆ . ಹಾಗೂ ಸಂಘವು ದಿನವಹಿ 3750 ಲೀಟರ್ ಹಾಲನ್ನು ಸಂಗ್ರಹಣೆ ಮಾಡುತ್ತಿದೆ. ಸಂಘವು ಸ್ವಯಂ ಚಾಲಿತ ಹಾಲು ಶೇಖರಣಾ ಘಟಕವನ್ನು ಹೊಂದಿದ್ದು ದಿನಾಂಕ 14-07-2002 ರಿಂದ ” ಹಾಲು ಶೀತಲೀಕರಣ ಘಟಕ “ವನ್ನು ಹೊಂದಿರುತ್ತದೆ. ಸಂಘವು ಜಿಲ್ಲಾ ಮಟ್ಟದಲ್ಲಿಯೂ ” ಅತ್ಯುತ್ತಮ ಸಂಘ ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು 17 ಬಾರಿ ತಾಲ್ಲೂಕಿನ “ಅತ್ಯುತ್ತಮ ಸಂಘ” ಪ್ರಶಸ್ತಿಯನ್ನು , ಮೂರು ಬಾರಿ ಒಕ್ಕೂಟದ “ಅಗ್ರಮಾನ್ಯ ಸಂಘ ” ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಟ್ರಸ್ಟ್ ನಿಂದ ” ಅತ್ಯುತ್ತಮ ಸಂಘ” ಪ್ರಶಸ್ತಿಯನ್ನು ಪಡೆದಿದೆ. ಒಕ್ಕೂಟದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ” ಅತ್ಯುತ್ತಮ ಸಂಘ ” ಪ್ರಶಸ್ತಿಯನ್ನು ಪಡೆದಿದೆ ಎಂದರು. ಪದನಿಮಿತ್ತ ಸದಸ್ಯೆ ಮಾಲತಿ ಯವರು ಲೆಕ್ಕಪರಿಶೋಧನಾ ವರದಿಯನ್ನು ಓದಿ ಹೇಳಿದರು. ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಉತ್ತೀರ್ಣ ರಾದ ಸಂಘದ ಸದಸ್ಯರ ಮಕ್ಕಳಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಅಧ್ಯಕ್ಷೀಯ ಭಾಷಣ ಮಾಡಿದ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ರವರು ಸಂಘದ ಅಭಿವೃದ್ಧಿಗೆ ಸಹಕರಿಸಿದ ಗ್ರಾಹಕರಿಗೂ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು.

ಸಿಬ್ಬಂದಿಗಳಾದ ಗುರುಪ್ರಸಾದ್, ಅಮಿತ್ ಕುಮಾರ್ ಮತ್ತು ರಿಜೇಶ್ ಕುಮಾರ್ ಸಹಕರಿಸಿದರು. ನಿರ್ದೇಶಕ ರಮಾನಂದ ಎಂ. ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here