ಕಳಿಯ ಗ್ರಾ.ಪಂ.ನ ನಿಕಟಪೂರ್ವ ಪಿಡಿಓ ಸಂತೋಷ್ ಪಾಟೀಲ್ ರಾಜ್ಯಮಟ್ಟದ “ಈಸ್ವತ್ತು ಸಮಸ್ಯೆಗಳ ನಿವಾರಣಾ ಸಮಿತಿ” ಸದಸ್ಯರಾಗಿ ನೇಮಕ

0

ಬೆಳ್ತಂಗಡಿ: ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯ ರಾಜ್ಯ ಮಟ್ಟದ ಈ ಸ್ವತ್ತು ಸಮಸ್ಯೆಗಳ ನಿವಾರಣಾ 8 ಜನರ ಸಮಿತಿಯನ್ನು ಮುಂದಿನ 2 ತಿಂಗಳ ಅಥವಾ ಮುಂದಿನ ಆದೇಶದವರೆಗೆ ರಚಿಸಿದ್ದು, ಈ ಸಮಿತಿಯಲ್ಲಿ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಈ ಹಿಂದೆ ಏಳು ವರ್ಷಗಳ ಕಾಲ ಜನಸ್ನೇಹಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡಿರುವ ಬೆಳಗಾವಿ ಮೂಲದ ಸಂತೋಷ್ ಪಾಟೀಲ್ ರವರನ್ನು ಸರಕಾರ ನಿಯೋಜಿಸಿ ಆದೇಶ ಮಾಡಿದೆ.

ಅವರು ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಕೂಡಾ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ಸ್ವಲ್ಪ ಸಮಯ ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸಿದ್ದರು. ಬೆಳಗಾವಿ ಜಿಲ್ಲೆಗೆ ಹೋದ ನಂತರ ಕೂಡಾ ಬೆಳಗಾವಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಳ ಸಜ್ಜನಿಕೆಯ, ಮೃಧು ಸ್ವಭಾವದ, ದಕ್ಷ ಅಧಿಕಾರಿಯಾಗಿ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲರ ಮನ ಗೆದ್ದಿದ್ದರು. ಇದಕ್ಕಾಗಿಯೇ ವರ್ಗಾವಣೆಗೊಂಡ ನಂತರ ಪಂಚಾಯತ್ ಆಡಳಿತ ಮಂಡಳಿ, ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ಊರ ನಾಗರಿಕರಿಂದ ಅಭೂತಪೂರ್ವ ಬೀಳ್ಗೊಡುಗೆ ಸಮಾರಂಭ ನಡೆಸಿದ್ದರು.

LEAVE A REPLY

Please enter your comment!
Please enter your name here