








ಉಜಿರೆ: ಏಕಲವ್ಯ ಫ್ರೆಂಡ್ಸ್ ಓಡಲ, ಹಳೆ ವಿದ್ಯಾರ್ಥಿ ಸಂಘ ದೊಂಪದಪಲ್ಕೆ ಮತ್ತು ಊರವರ ಆಶ್ರಯದಲ್ಲಿ ಓಡಲ ದೊಂಪದಪಲ್ಕೆಯಲ್ಲಿ ಸೆ. 13ರಂದು ನಡೆಯಲಿರುವ 2ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಗಣೇಶ ಪೂಜಾರಿ, ಉಪಾಧ್ಯಕ್ಷರಾಗಿ ಗಣೇಶ ಜಿ.ಎಸ್., ಕಾರ್ಯದರ್ಶಿಯಾಗಿ ಸುಜಿತ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಏಕಲವ್ಯ ಫ್ರೆಂಡ್ಸ್ ಸದಸ್ಯರು, ಊರವರು ಉಪಸ್ಥಿತರಿದ್ದರು.









