ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಮುಹಮ್ಮದ್ ಹುಝೈರ್ ಗೆ ಚಿನ್ನದ ಪದಕ

0

ಬೆಳ್ತಂಗಡಿ: ಶೊರೀನ್ ರಿಯ ಕರಾಟೆ ಅಸೋಸಿಯೇಷನ್ ಮತ್ತು ಸ್ವಾಮಿಸ್ ಸ್ಟ್ರೆಂಥ್ ಟ್ರೈನಿಂಗ್ ಆಶ್ರಯದಲ್ಲಿ ಮೂಡಬಿದ್ರೆಯ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ, ಮೂಡಬಿದ್ರೆಯ ಸೈಟ್ಸ್ -ಗೈಡ್ಸ್ ಕರ್ನಾಟಕ ಭವನದಲ್ಲಿ ನಡೆದ ರಾಜ್ಯ ಮಟ್ಟದ 23ನೇ ಕರಾಟೆ ಚಾಂಪಿಯನ್‌ಶಿಪ್‌ನ ಕಲರ್ ಬೆಲ್ಟ್ ಫೈಟಿಂಗ್ ವಿಭಾಗದಲ್ಲಿ ತೋಟತ್ತಾಡಿ ಸೈಂಟ್ ಸಾವ್ಯ ಬೆಂದ್ರಾಳ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಹುಝೈರ್ ಪ್ರಥಮ ಸ್ಥಾನದೊಂದಿಗೆ, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಖ್ಯಾತ ಕರಾಟೆ ತರಬೇತುದಾರ ಅಬ್ದುಲ್ ರೆಹಮಾನ್ ಅವರಿಂದ ತರಬೇತಿ ಪಡೆಯುತ್ತಿರುವ ಮುಹಮ್ಮದ್ ಹುಝೈರ್ ಅವರು ಕಕ್ಕಿಂಜೆಯ ಅಬ್ದುಲ್ ಜಲೀಲ್ ಮತ್ತು ಶಮೀಮಾ ಬಾನು ದಂಪತಿಯ ಪುತ್ರ.

LEAVE A REPLY

Please enter your comment!
Please enter your name here