ಬೆಳ್ತಂಗಡಿ: ಜಮೀನಿಗೆ ದಾರಿ ನಿರಾಕರಣೆ – ತಾಲೂಕು ಕಚೇರಿ ಎದುರು ಹರಿಪ್ರಸಾದ್ ಇರ್ವತ್ರಾಯ ಧರಣಿ ಸತ್ಯಾಗ್ರಹ

0

ಬೆಳ್ತಂಗಡಿ: ಜಾಗಕ್ಕೆ ಹೋಗಲು ದಾರಿ ಹಕ್ಕಿಗಾಗಿ ಆಗ್ರಹಿಸಿ ನಿಡ್ಲೆ ಗ್ರಾಮದ ಹರಿಪ್ರಸಾದ್ ಇರ್ವತ್ರಾಯ ಅವರು ಆ.27ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.ನಿಡ್ಲೆ ಗ್ರಾಮದಲ್ಲಿ ನನಗೆ 3 ಎಕರೆ ಜಮೀನಿದ್ದು, ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡುವಾಗ ಊರ್ಜಿತದಲ್ಲಿದ್ದ ದಾರಿಯನ್ನು ತಹಶೀಲ್ದಾರ್ ಭೂಪರಿವರ್ತನೆ ವೇಳೆ ರದ್ದುಪಡಿಸಿದ್ದಾರೆ.

1993ರಿಂದಲೂ ಇದ್ದ ರಸ್ತೆಯನ್ನು 2021ರಲ್ಲಿ ಭೂಪರಿವರ್ತನೆ ಮಾಡುವಾಗ ರದ್ದು ಮಾಡಲಾಗಿದೆ ಎಂದು ಅವರು ಆರೋಪಿಸಿದರು.ಕಳೆದ ಒಂದು ವರ್ಷದಿಂದ ಕಚೇರಿಗೆ ಅಲೆದಾಡಿ ಕಾಲು ಸವೆದು ಹೋಗಿದೆಯೇ ಹೊರತು ಸಮಸ್ಯೆ ಪರಿಹಾರವಾಗಿಲ್ಲ. ಹಾಗಾಗಿ ಕಚೇರಿ ಎದುರು ಧರಣಿ ನಡೆಸುತ್ತಿದ್ದೇನೆ. ಕೂಡಲೇ ನನ್ನ ಸಮಸ್ಯೆ ಪರಿಹರಿಸಬೇಕು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here