ಶಿರ್ಲಾಲು: ಸುಳ್ಕೇರಿಮೊಗ್ರು ಸಹಕಾರಿ ಬ್ಯಾಂಕ್ ಪಡಿತರ ಮಳಿಗೆಯ ಅಸ್ತವ್ಯಸ್ತತೆ; ಫಲಾನುಭವಿಗಳಿಂದ ಪ್ರತಿಭಟನೆಯ ಎಚ್ಚರಿಕೆ

0

ಶಿರ್ಲಾಲು: ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ಕೇರಿಮೊಗ್ರು ಸಹಕಾರಿ ವ್ಯವಸಾಯಿಕ ಬ್ಯಾಂಕ್ ನಿಯಮಿತ ಶಿರ್ಲಾಲು ಇಲ್ಲಿ ಕಳೆದ ಕೆಲವು ದಿನಗಳಿಂದ ಪಡಿತರ ಸಾಮಾಗ್ರಿಗಳನ್ನು ಪಡೆಯಲು ಸಾರ್ವಜನಿಕರು ತೀವ್ರ ಪರದಾಡುತ್ತಿದ್ದು, ಆಡಳಿತ ಹಾಗೂ ಆಹಾರ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.​

ಪ್ರಮುಖ ಸಮಸ್ಯೆಗಳು:​ಸಮಯ ಪಾಲನೆಯಿಲ್ಲ: ಸರ್ಕಾರದ ನಿಯಮದ ಪ್ರಕಾರ ಪಡಿತರ ವಿತರಣೆಯ ಸಮಯ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಎಂದು ನಿಗದಿಪಡಿಸಲಾಗಿದೆ. ಆದರೆ ಇಲ್ಲಿ ಮಾತ್ರ ಬೆಳಿಗ್ಗೆ 10 ಗಂಟೆಯಾದರೂ ಮಳಿಗೆಯ ಬಾಗಿಲು ತೆರೆಯುವುದಿಲ್ಲ ಎಂಬ ಆರೋಪ ಕೇಳಿಬಂದಿದೆ.​

ದೂರದಿಂದ ಬರುವ ಸಾರ್ವಜನಿಕರಿಗೆ ಗೋಳು: ಸುತ್ತಮುತ್ತಲಿನ ಹಳ್ಳಿಗಳಿಂದ 3 ರಿಂದ 4 ಕಿಲೋಮೀಟರ್ ದೂರದಿಂದ ಬರುವ ನೂರಾರು ಜನರು ಬೆಳಿಗ್ಗೆ 6 ಗಂಟೆಯಿಂದಲೇ ಬಂದು ಗಂಟೆಗಟ್ಟಲೆ ಕಾದು ಸುಸ್ತಾಗುವಂತಾಗಿದೆ.​ಸರ್ವರ್ ಸಮಸ್ಯೆ ಹಾಗೂ ಇಲಾಖೆಯ ಮೌನ: ಸರ್ವರ್ ಸಮಸ್ಯೆಗೆ ಹಾಗೂ ಅನಿಯಮಿತ ಸಮಯಕ್ಕೆ ಸರಿಯಾದ ಪರಿಹಾರ ಕಲ್ಪಿಸದೆ ಸಂಬಂಧಪಟ್ಟ ತಾಲೂಕು ಆಹಾರ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.​

ಎಚ್ಚರಿಕೆ:​ಪಡಿತರ ವಿತರಣೆಯ ವ್ಯವಸ್ಥೆಯನ್ನು ತಕ್ಷಣವೇ ಸರಿಪಡಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಪಡಿತರ ಫಲಾನುಭವಿಗಳೇ ಒಗ್ಗೂಡಿ ಉಗ್ರ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here