ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 374.87ಕೋಟಿ ವ್ಯವಹಾರ ರೂ. 2.13 ಕೋಟಿ ಲಾಭ ಶೇ. 25% ಡಿವಿಡೆಂಡ್

0

ಬೆಳ್ತಂಗಡಿ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಆ.22ರಂದು ಇಲ್ಲಿನ ಸಿವಿಸಿ ಹಾಲ್‌ನಲ್ಲಿ ಜರಗಿತು. ಸಂಘದ ಅಧ್ಯಕ್ಷ ಹನ್ರಿ ಲೋಬೊ ಈ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಂಘವು 2025-26ನೇ ಸಾಲಿನಲ್ಲಿ ರೂ. 374.87 ಕೋಟಿ ವ್ಯವಹಾರ ನಡೆಸಿ ರೂ. 2.13 ಕೋಟಿ ಲಾಭ ಗಳಿಸಿದೆ. ರೂ. 119.25 ಕೋಟಿ ಠೇವಣಿ ಸಂಗ್ರಹವಾಗಿದೆ. ಸಂಘದಲ್ಲಿ ಒಟ್ಟು 2763 ಸದಸ್ಯರಿದ್ದು, ರೂ. 93 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ. ಸದಸ್ಯರಿಗೆ ಶೇ 25% ಡಿವಿಡೆಂಡ್ ಘೋಸಿಸಿದರು. ಸಂಘದ ಬೆಳವಣಿಗೆ ಅಳದಂಗಡಿಯಲ್ಲಿ ಸ್ವಂತ ಕಟ್ಟಡ ಖರೀದಿಸಿದ್ದು, ಸೋಮಂತಡ್ಕದಲ್ಲಿ ಮೇ 20ರಂದು ನೂತನ ಶಾಖೆ ಪ್ರಾರಂಭಿಸಲಾಗಿದೆ.

ಕೊಕ್ಕಡದಲ್ಲಿ ನೂತನ ಶಾಖೆಯ ಕೆಲಸ ಪ್ರಗತಿಯಲ್ಲಿದೆ ಎಂದರು.ಸಂಘದ ಸದಸ್ಯರ 42 ಮಕ್ಕಳಿಗೆ ರೂ. 3.90ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡೇನಿಸ್ ಸಿಕ್ವೆರಾ, ನಿರ್ದೇಶಕರುಗಳಾದ ಜೇಮ್ಸ್ ಡಿ’ಸೋಜ, ಹೆರಾಲ್ಡ್ ಪಿಂಟೊ, ಜೋಸೆಫ್ ಪೀಟರ್ ಸಲ್ದಾನ್ಹ, ಅಲ್ಫೋನ್ಸ್ ರೋಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ, ತೋಮಸ್ ಆರ್.ನೊರೊನ್ಹಾ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲಾವಿಯಾ ಡಿ’ಸೋಜಾ, ವಿನಯ್ ಜಾನ್ಸನ್ ಡಿಸೋಜ, ರಿಯೋ ಮೈಕಲ್ ರೊಡ್ರಿಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ -ಐವನ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ಅಳದಂಗಡಿ ಶಾಖಾ ವ್ಯವಸ್ಥಾಪಕ ಜೆರೋಮ್ ಡಿ’ಸೋಜ ಮಹಾ ಸಭೆಯ ನೋಟೀಸ್ ಓದಿ ದೃಢಕರಿಸಿದರು. ಕೇಂದ್ರ ಕಛೇರಿ ಶಾಖಾ ವ್ಯವಸ್ಥಾಪಕಿ ಶಾಂತಿ ಸಿ. ಡಿ. 2024-25ನೇ ಸಾಲಿನ ನಡವಳಿ ಸಭೆಯಲ್ಲಿ ಓದಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ವಾರ್ಷಿಕ ವರದಿ ಮಂಡಿಸಿದರು. ನಾರಾವಿ ಶಾಖಾ ವ್ಯವಸ್ಥಾಪಕ ವಾಲ್ಟರ್ ಡಿ’ಸೋಜ, ವೇಣೂರು ಶಾಖಾ ವ್ಯವಸ್ಥಾಪಕಿ ಮೀನಾ ಮಿರಾಂದ,ಸೋಮಂತಡ್ಕ ಶಾಖಾ ವ್ಯವಸ್ತಾಪಕಿ ಸುನಿತಾ ಪಾಯ್ಸ್, ಸಿಬಂದಿಗಳಾದ ಅಜಯ್ ರೊಡ್ರಿಗಸ್, ವಿಲ್ಫ್ರೇಡ್ ಡಿಸೋಜಾ, ಲ್ಯಾನ್ಸಿ ಲೋಬೊ, ಜಾನೆಟ್ ಜೆಸ್ವಿಟಾ ಕ್ರಾಸ್ತಾ, ಪ್ರತಿಮಾ ಪ್ಲಾವಿಯಾಕ್ರಾಸ್ತಾ, ರಶ್ಮಿ ಲೋಬೊ, ರೋಯಲ್ ಮೋರಸ್, ಜೋಯಲ್ ಡಿ’ಸೋಜಾ, ಸ್ಟೆಲ್ಲಾ ಲೋಬೊ, ವಿನೋದ್ ಡಿ’ಸೋಜಾ, ವಿಲ್ಮಾ ರೊಡ್ರಿಗಸ್, ಸುಪ್ರಿತಾ ಮಿನೇಜಸ್, ಶಿಲ್ಪ ಎಂ., ಆಡ್ಲಿನ್ ಅನ್ಸಿಲ್ಲಾ ಡಿಸೋಜ, ಪ್ರಿಯಾ ಎ. ಜೆ., ಪ್ರಿಯಾ ಮೆಂಡೋನ್ಸ, ಪ್ರಜ್ವಲ್ ಲೋಬೊ, ನಿರ್ಮಲ್ ಸಹಕರಿಸಿದರು. ಅಧ್ಯಕ್ಷ ಹೆನ್ರಿ ಲೋಬೊ ಸ್ವಾಗತಿಸಿ, ಉಪಾಧ್ಯಕ್ಷ ಡೇನಿಸ್ ಸಿಕ್ವೆರಾ ವಂದಿಸಿದರು. ನಿರ್ದೇಶಕ ವಿನಯ್ ಜಾನ್ಸನ್ ಡಿಸೋಜ ಕಾರ್ಯಕ್ರಮನಿರೂಪಿಸಿದರು. ಮಹಾಸಭೆಯಲ್ಲಿ ಸ್ಥಾಪಕ ಪ್ರವರ್ತಕ ಪೀಟರ್ ಕ್ಯಾಲಿಸ್ಟ್ ಡಿಸೋಜಾ, ಪ್ರವರ್ತಕ ಫ್ರಾಂಕಿ ಡಿಸೋಜಾ, ಮಾಜಿ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಅಲೋಸಿಯಸ್ ಲೋಬೋ.ಮಾಜಿ ಉಪಾಧ್ಯಕ್ಷರುಗಳಾದ, ಜೋಸೆಫೀನ್ ಪಿಂಟೊ, ಸಿಪ್ರಿಯನ್ ಫೆರ್ನಾಂಡಿಸ್ ಡಿಸ್, ಅಲ್ಫೋನ್ಸ್ ಫ್ರಾಂಕೋ, ಮಾಜಿ ನಿರ್ದೇಶಕರಾದ ರುಡಾಲ್ಫ್ ಡಿ’ಸೋಜ, ಲಾರೆನ್ಸ್ ಡಿಸೋಜಾ, ವಲೇರಿಯನ್ ಪಾಯ್ಸ್, ಸಿರಿಲ್ ಪಾಯ್ಸ್, ಜೋಕಿಂ ಕ್ರಾಸ್ತ,ರೀಟಾ ಪಿಂಟೊ,ಸಂಘದ ಕಾನೂನು ಸಲಹೆದಾರರಾದ ಸೇವಿಯರ್ ಪಾಲೇಲಿ, ಹಾಗೂ ಸದಸ್ಯರು ಉಪಸ್ಥಿತರಿದ್ದರು.ಸಂಘದ ಸದಸ್ಯರು ಸಂಘದ ಅಭಿವೃದ್ಧಿ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here