







ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಕ್ಕೆನೇಜಿ ಎಂಬಲ್ಲಿ ದಿನಸಿ ಅಂಗಡಿಯಲ್ಲಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡ ಘಟನೆ. ಆ.19 ರಂದು ನಡೆದಿದೆ.



ಕಕ್ಕೆನೇಜಿ ವಾಸುದೇವ ರಾವ್ ಅಂಗಡಿಗೆಯೊಳಗೆ ಮಧ್ಯಾಹ್ನ ವೇಳೆ ಸೇರಿಕೊಂಡ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಲಾಯಿಲದ ಉರಗ ಮಿತ್ರ ಸ್ನೇಕ್ ಅಶೋಕ್ ಅವರು ಸೆರೆ ಹಿಡಿದು ಅರಣ್ಯ ಸೇರಿಸಿದ್ದಾರೆ. ಹಾವಿನ ರಕ್ಷಣ ಕಾರ್ಯಾಚರಣೆಯ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಕರಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.









