ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕಳ್ಳತನ ವಾರೆಂಟ್ ಆರೋಪಿ ಪುತ್ತೂರಿನಲ್ಲಿ ಬಂಧನ

0

ಬೆಳ್ತಂಗಡಿ: ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ವಾರೆಂಟ್ ಆರೋಪಿಯನ್ನು ವೇಣೂರು ಪೊಲೀಸರು ಆ.13 ರಂದು ಪುತ್ತೂರಿನ ದರ್ಬೆಯಲ್ಲಿ ಬಂಧಿಸಿದ್ದಾರೆ.

ವೇಣೂರು ಪೊಲೀಸ್ ಠಾಣಾ ಅಕ್ರ: 71/2008 ಮತ್ತು ಬೆಳ್ತಂಗಡಿ ನ್ಯಾಯಾಲಯದ CC No.535/2016 ರಲ್ಲಿ ಐಪಿಸಿ ಕಲಂ 457, 380 ರಡಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ವಾರಂಟ್ ಜಾರಿಯಾಗಿತ್ತು.ಈ ಪ್ರಕರಣದ ಆರೋಪಿ ಸುಳ್ಯ ತಾಲೂಕಿನ ಐವತ್ತೋಕ್ಲು ಗ್ರಾಮದ ನೆಲ್ಲಿಕಟ್ಟೆ ನಿವಾಸಿ ಆದಮ್ ಅವರ ಪುತ್ರ ಮಹಮ್ಮದ್ ಶರೀಪ್ (46) ಎಂಬಾತನನ್ನು ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ ಮತ್ತು ವೃತ್ತ ನಿರೀಕ್ಷಕ ರವಿ ಬಿ.ಎಸ್ ಅವರ ಮಾರ್ಗದರ್ಶನದಲ್ಲಿ, ವೇಣೂರು ಠಾಣಾ ಎಸ್‌ಐ ಅಕ್ಷಯ್ ಢವಗಿ ನೇತೃತ್ವದ ತಂಡ ಪುತ್ತೂರಿನ ದರ್ಬೆಯಲ್ಲಿ ದಸ್ತಗಿರಿ ಮಾಡಿತು.

ತಂಡದಲ್ಲಿ ಎಎಸ್ಐ ಬೆಣ್ಣಿಚನ್, ಸಿಬ್ಬಂದಿ ಬಸವರಾಜ್ ಹಾಗೂ ಬೆಳ್ತಂಗಡಿ ಉಪವಿಭಾಗ ಕಚೇರಿ ಸಿಬ್ಬಂದಿ ಪ್ರವೀಣ್ ಮೂರುಗೋಳಿ ಭಾಗವಹಿಸಿದ್ದರು.ಬಂಧಿತ ಆರೋಪಿಯನ್ನು ವೇಣೂರು ಠಾಣಾ ಸಿಬ್ಬಂದಿ ನಿಕೋಲಸ್, ಬಸವರಾಜ್ ಮತ್ತು ಆಕಾಶ ಅವರ ಭದ್ರತೆಯಲ್ಲಿ ಆ.13 ರಂದು ಸಂಜೆ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here