






ಪುಂಜಾಲಕಟ್ಟೆ :ಮಾದಕವಸ್ತು ಪ್ರಕರಣದಲ್ಲಿ ಸುಮಾರು 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಕೇರಳದ ಮಂಜೇಶ್ವರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



ಪುಂಜಾಲಕಟ್ಟೆ ಠಾಣಾ ಅಕ್ರ: 98/2019, ಕಲಂ 27(b) NDPS ಕಾಯ್ದೆ ಹಾಗೂ ಬಂಟ್ವಾಳದ ಮಾನ್ಯ ಹಿರಿಯ ಸಿವಿಲ್ ನ್ಯಾಯಾಲಯದ ಸಿಸಿ ನಂ. 08/2020 ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿತ್ತು. ಈ ಪ್ರಕರಣದ ಆರೋಪಿ ಚಿಕ್ಕಮಗಳೂರು ಜಿಲ್ಲೆ, ಸಂತೆ ಮಾರ್ಕೆಟ್ ರೋಡ್ ನಿವಾಸಿ ಎಂ.ಡಿ. ಸೈಫ್ ಅಲಿಯಾಸ್ ಮೊಹಮ್ಮದ್ ಸೈಫ್ (32) ಎಂಬಾತನನ್ನು ಆ.13 ರಂದು ಕೇರಳ ರಾಜ್ಯದ ಮಂಜೇಶ್ವರದ ಕಡಂಬಾರು ಎಂಬಲ್ಲಿಂದ ಪುಂಜಾಲಕಟ್ಟೆ ಪೊಲೀಸರು ಬಂಧಿಸಿದರು.ಬಂಧಿತ ಆರೋಪಿಯನ್ನು ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಲಯವು ಆರೋಪಿಗೆ 10 ಸಾವಿರ ರೂ. ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿತು.ಪೊಲೀಸ್ ಕಾರ್ಯಾಚರಣೆ:ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ.ಸಿ.ಕೆ ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್ ಅವರ ಮಾರ್ಗದರ್ಶನದಲ್ಲಿ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜೇಶ್ ಕೆ.ವಿ ನೇತೃತ್ವದ ಸಿಬ್ಬಂದಿ ಹೆಚ್ಸಿ ರಾಜೇಶ್, ಪಿಸಿ ಚೋಳಪ್ಪ ಸಂಶಿ, ಪಿಸಿ ನಾಗರಾಜ್ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.









