ಶಿಬಾಜೆ: ಮನೆಯ ಕಪಾಟಿನಡಿ ಬಂದು ಸೇರಿಕೊಂಡ ಕಾಳಿಂಗ ಸರ್ಪ

0

ಶಿಬಾಜೆ: ಗ್ರಾಮದ ಬೂಡ್ದಮಕ್ಕಿ ನಿವಾಸಿ ಚೆನ್ನಪ್ಪ ಅವರ ಮನೆಯ ಕೋಣೆಯ ಕಪಾಟಿನ ಕೆಳಗೆ ಕಾಳಿಂಗ ಸರ್ಪವೊಂದು ಬಂದು ಸೇರಿಕೊಂಡ ಘಟನೆ ಆ.13ರಂದು ಸಂಜೆ ನಡೆದಿದೆ.ಕೇರೆ ಹಾವೊಂದನ್ನು ಅಟ್ಟಿಸಿಕೊಂಡು ಬಂದ ಕಾಳಿಂಗ ಸರ್ಪವು ಮನೆಯೊಳಗೆ ಪ್ರವೇಶಿಸಿದ್ದು, ಮನೆಯವರನ್ನು ಕಂಡು ಗಾಬರಿಗೊಂಡು ಕೋಣೆಯ ಕಪಾಟಿನ ಕೆಳಗೆ ಸೇರಿಕೊಂಡಿತ್ತು. ಇದರಿಂದ ಭಯಗೊಂಡ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಳೆಂಜ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಗಸ್ತು ಅರಣ್ಯ ಪಾಲಕ ಉಮೇಶ್ ಎಂ. ಅವರ ಸೂಚನೆಯಂತೆ ಸ್ಥಳೀಯ ಉರಗ ರಕ್ಷಕ ರಮೇಶ್ ಅವರು ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿದರು.ನಂತರ ಕಾಳಿಂಗ ಸರ್ಪವನ್ನು ಸ್ಥಳೀಯ ಕಾಡಿಗೆ ಕೊಂಡೊಯ್ದು ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಯಿತು.

LEAVE A REPLY

Please enter your comment!
Please enter your name here