






ಬೆಳ್ತಂಗಡಿ: ಗ್ರಾಹಕರ ಬೇಡಿಕೆಯ ಮೇರೆಗೆ ಹೆಚ್ಡಿಎಫ್ಸಿ ಬ್ಯಾಂಕ್ ಬೆಳ್ತಂಗಡಿ ಶಾಖೆಯಲ್ಲಿ CDM – Cash Deposit Machine ಸೌಲಭ್ಯವನ್ನು ಆರಂಭಿಸಲಾಗಿದೆ. ಇನ್ನು ಮುಂದೆ ಹೆಚ್ಡಿಎಫ್ಸಿ ಬ್ಯಾಂಕಿನ ಗ್ರಾಹಕರು ಯಾವುದೇ ಸಮಯದಲ್ಲಿ ನಗದು ಠೇವಣಿ ಮಾಡಿಕೊಳ್ಳಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.



ಈ ಹೊಸ ಸೇವೆಯು ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ನೀಡಲಿದೆ.ಈ ಚಾಲನೆಯನ್ನು ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ನ ಮಾಲೀಕರಾದ ಪ್ರಮೋದ್ ಆರ್. ನಾಯಕ್ ಹಾಗೂ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಸಂತೋಷ್ ಮೂಲ್ಯ ಅವರು ಜಂಟಿಯಾಗಿ ನೆರವೇರಿಸಿದರು.
ಶಾಖೆಯ ಸಿಬ್ಬಂದಿಗಳಾದ ವಿನಾಯಕ್ ಎನ್.ಜೆ, ಪ್ರದೀಪ್ ಶೆಟ್ಟಿ ಎಸ್, ಅಕ್ಷತಾ ಪಿ ಹಾಗೂ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು. ವ್ಯವಸ್ಥಾಪಕರಾದ ಸಂತೋಷ್ ಮೂಲ್ಯ ಅವರು ಸಿಡಿಎಂನ ಪ್ರಯೋಜನಗಳು ಹಾಗೂ ಅದನ್ನು ಬಳಸುವ ವಿಧಾನದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು.









