







ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾಮೋರ್ಚಾದ ವತಿಯಿಂದ ತಿಂಗಳ ಸಭೆ ಹಾಗೂ ಆಟಿಡ್ ಒಂಜಿ ವಿಶೇಷ ತಿನಸ್ ಅನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ವಸಂತಿ ಮಚ್ಚಿನ ಇವರು ಜಿಲ್ಲಾ ಮಹಿಳಾಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕಿತ ಶೆಟ್ಟಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹಾಗೂ ಬೆಳ್ತಂಗಡಿ ಮಂಡಲದ ಪ್ರಭಾರಿ ಕಮಲಾಕ್ಷಿ ಇವರು ಹಾಗೂ ಮಹಿಳಾಮೋರ್ಚಾದ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಹಾಗೂ ಜಿಲ್ಲಾ ಕಾರ್ಯದರ್ಶಿ ಅಮಿತಾ ಕುಶಾಲಪ್ಪ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜಯಂತ್ ಹಾಗೂ ತುಳಸಿ ಉಮೇಶ್ ಹಾಗೂ ಮಹಿಳಾ ಮೋರ್ಚ ಪದಾಧಿಕಾರಿಗಳು ಸದಸ್ಯರು ಹಾಗೂ ಅನನ್ಯ ಜವಾಬ್ದಾರಿಯುತ ಸದಸ್ಯರು ಭಾಗವಹಿಸಿದರು.



ಆಟಿ ತಿಂಗಳಿನಲ್ಲಿ ಮಾಡುವಂತಹ 25 ಬಗೆಯ ವಿಶೇಷ ತಿನಿಸುಗಳನ್ನು ಪ್ರತಿಯೊಬ್ಬರ ಮನೆಯಿಂದ ತಂದು ಎಲ್ಲರೂ ಹಂಚಿಕೊಂಡು ತಿಂದು ಆಟಿತಿಂಗಳಿನ ಹಿಂದಿನ ವಿಶೇಷತೆಯ ಬಗ್ಗೆ ಹಾಗೂ ಮುಂದಿನ ಪೀಳಿಗೆಯು ಇದನ್ನು ನೆನಪಿಟ್ಟುಕೊಳ್ಳುವಂತೆ ತಾಯಂದಿರು ತಮ್ಮ ಮಕ್ಕಳಿಗೆ ಮನದಟ್ಟು ಮಾಡಬೇಕೆಂದು ಹಿರಿಯರಾದ ಕಮಲಾಕ್ಷಿ ಹೇಳಿದರು.

ತುಳಸಿ ಇವರು ಕಾರ್ಯಕ್ರಮವನ್ನು ನಿರೂಪಿಸಿ ಶಾರದಾ ಇವರು ಸ್ವಾಗತಿಸಿ ಮಂಜುಳಾ ನಡ ಇವರು ಧನ್ಯವಾದವನ್ನಿತ್ತರು.










