






ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಗೆ ಉಡುಪಿ ವಿಭಾಗದ ಮುಖ್ಯ ಅಧಿಕಾರಿ ಗಣಪತಿ ಭಟ್ ವಿಶೇಷ ಭೇಟಿ ಮತ್ತು ಪ್ರತಿನಿಧಿಗಳ ಸಭೆ ಆ. 11ರಂದು ಕಚೇರಿಯಲ್ಲಿ ನಡೆಯಿತು.
ಉಡುಪಿ ವಿಭಾಗದ ಮಾರ್ಕೆಟಿಂಗ್ ಮೆನೇಜರ್ ಗುರುರಾಜ್, ಬಂಟ್ವಾಳ ಶಾಖಾ ಹಿರಿಯ ಶಾಖಾಧಿಕಾರಿಕಿ ಗುರುದತ್ತ ನಾಯಕ್ ಭಾಗವಹಿಸಿ ಹೊಸ ವ್ಯವಹಾರದ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಹೊಸ ವ್ಯವಹಾರದಲ್ಲಿ ಸಾಧನೆ ಗೈದ ಪ್ರತಿನಿಧಿಗಳನ್ನು ಗೌರವಿಸಿದರು.


ಬೆಳ್ತಂಗಡಿ ಶಾಖಾಧಿಕಾರಿ ಸಂತೋಷ ರೆಡ್ಡಿ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.ಅಭಿವೃದ್ಧಿ ಅಧಿಕಾರಿ ಟಿ. ಡಿ. ರಾಘವೇಂದ್ರ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಎಂ. ವಿ. ಶೆಟ್ಟಿ ವಂದಿಸಿದರು.
ಅಭಿವೃದ್ಧಿ ಅಧಿಕಾರಿಗಳಾದ ಉದಯ ಶಂಕರ್, ವಿನಯ, ಸಂದೀಪ್, ಆಡಳಿತಾಧಿಕಾರಿ ಕೇಶವ,ಹೆಚ್ಚಿನ ಪ್ರತಿನಿಧಿಗಳು ಹಾಜರಿದ್ದರು.









