







ನಾಲ್ಕೂರು.ತೋಟದಪಲ್ಕೆಯ ಸತ್ಯಶ್ರೀ ಪ್ರೆಂಡ್ಸ್ ಸದಸ್ಯರಿಂದ ನಿಟ್ಟಡ್ಕದವರೆಗೆ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸುವ ಕೆಲಸ ಇತ್ತೀಚೆಗೆ ನಡೆಯಿತು.



ನವೀನ್, ದೀಕ್ಷಿತ್, ಸುಜಿತ್, ರಾಜೇಶ್ ಹಾಗೂ ರೋಲೆಂಡ್ಅವರು ತಮ್ಮ ಸ್ವಂತ ಶ್ರಮದಿಂದ ಬಳಂಜ–ತೋಟದಪಲ್ಕೆ ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಉತ್ತಮ ಸಮಾಜ ಸೇವೆ ಸಲ್ಲಿಸಿದ್ದಾರೆ.
ಸಾರ್ವಜನಿಕ ಹಿತಕ್ಕಾಗಿ ತಮ್ಮ ಸಮಯ, ಶ್ರಮ ಹಾಗೂ ಸೇವಾ ಮನೋಭಾವವನ್ನು ಅರ್ಪಿಸಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ನಾಗರಿಕರು ಅಭಿನಂದಿಸಿದ್ದಾರೆ.









