ಆ.10 ಬೆಳ್ತಂಗಡಿ ಹರಿದ್ವಾರದಲ್ಲಿ ಮನೆಯಲ್ಲಿ ಯಾಂತ್ರಿಕೃತ ಭತ್ತದ ನಾಟಿ ಕಾರ್ಯಕ್ರಮ

0

​ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು, ರೋಟರಿ ಕ್ಲಬ್ ಬೆಳ್ತಂಗಡಿ, ಆನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ, ಹಳೆ ವಿದ್ಯಾರ್ಥಿ ಸಂಘ ಮತ್ತು ಕರ್ನೋಡಿ ಶಾಲೆ ಸಹಯೋಗದೊಂದಿಗೆ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರೋಟರಿ ಜಿಲ್ಲಾ ಯೋಜನೆ “ಜಲಸಂಜೀವಿನಿ”ಯಡಿ ಯಾಂತ್ರಿಕೃತ ಭತ್ತದ ನಾಟಿ ಕಾರ್ಯಕ್ರಮವು ಹರಿದ್ವಾರದ (ರೊ. ಬಿ.ಕೆ. ಧನಂಜಯ ರಾವ್ ಅವರ ಮನೆಯಲ್ಲಿ) ಕೃಷಿ ಭೂಮಿಯಲ್ಲಿ ಆ. 10 ರಂದು ಜರುಗಲಿದೆ.​

ಕಾರ್ಯಕ್ರಮದ ಉದ್ಘಾಟನೆಯನ್ನು ​ ಮನೋಜ್ ಮಿನೆಜಸ್ ಕೃಷಿ ಮತ್ತು ಸಿ.ಹೆಚ್.ಎಸ್.ಸಿ ಪ್ರಾದೇಶಿಕ ನಿರ್ದೇಶಕರು, ಕೇಂದ್ರ ಕಚೇರಿ ಧರ್ಮಸ್ಥಳ ನೇರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ​ರೊ. ಶ್ರೀಧರ್ ಕೆ.ವಿ.ಅಧ್ಯಕ್ಷರು, ರೋಟರಿ ಕ್ಲಬ್ ಬೆಳ್ತಂಗಡಿ ವಹಿಸಲಿದ್ದಾರೆ.​

ಮುಖ್ಯ ಅತಿಥಿಗಳಾಗಿ ರಾಜಶ್ರೀ ರಾವ್ – ಅಧ್ಯಕ್ಷರು, ಆನ್ಸ್ ಕ್ಲಬ್ ಬೆಳ್ತಂಗಡಿ​ರಮೇಶ್ ಸಿ.ಕೆ. – ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಬೆಳ್ತಂಗಡಿ​, ರೊ. ರಾಘವೇಂದ್ರ ಪಿದಮಲೆ – ಕಾರ್ಯದರ್ಶಿ, ರೋಟರಿ ಕ್ಲಬ್ ಬೆಳ್ತಂಗಡಿ, ಶಶಿಧರ ಡೊಂಗ್ರೆ – ಅಸಿಸ್ಟೆಂಟ್ ಗವರ್ನರ್ ಜೋನ್ IV, ರೋಟರಿ ಜಿಲ್ಲೆ 3181​ ಅಪರ್ಣ ವಾಟ್ಟೆ – ಕಾರ್ಯದರ್ಶಿ, ಆನ್ಸ್ ಕ್ಲಬ್ ಬೆಳ್ತಂಗಡಿ ಸೀತಾರಾಮ್ ಆರ್. ಬೆಳ್ತಂಗಡಿ – ಅಧ್ಯಕ್ಷರು, ಕೇಂದ್ರ ಒಕ್ಕೂಟ ಬೆಳ್ತಂಗಡಿ​, ಸುರೇಶ್ ಶೆಟ್ಟಿ ಲಾಯಿಲ – ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಕರ್ನೋಡಿ ಶಾಲೆ​ಹಾಗೂ ವಿಶೇಷ ಆಹ್ವಾನಿತರಾಗಿ ರೊ. ಬಿ.ಕೆ. ಧನಂಜಯ್ ರಾವ್ (ವಕೀಲರು, ಬೆಳ್ತಂಗಡಿ) ಮತ್ತು ಯಶೋಧರ (ಯೋಜನಾಧಿಕಾರಿಗಳು, ಎಸ್‌ಕೆಡಿಆರ್‌ಡಿಪಿ ಬೆಳ್ತಂಗಡಿ ತಾಲೂಕು) ಮೋಹನ್ (ಯೋಜನಾಧಿಕಾರಿಗಳು CHSC ದಕ್ಷಿಣ ಕನ್ನಡ ಮತ್ತು ಕೊಡಗು ವಿಭಾಗ)ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here