ಉಜಿರೆ : ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಮತ್ತು ಜೇನು ಕೃಷಿ ತರಬೇತಿ

0

ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ, ಕೃಷಿ ಇಲಾಖೆ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಮತ್ತು ಜೇನು ಕೃಷಿ ತರಬೇತಿ ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಮಣ್ಣು ಪರೀಕ್ಷೆ ಮತ್ತು ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆಯ ಬಗ್ಗೆ ಕೃಷಿ ಅಧಿಕಾರಿ ಗಣೇಶ್ ಇವರು ಸಮಗ್ರ ಮಾಹಿತಿ ನೀಡಿ, ಮಣ್ಣು ಆರೋಗ್ಯ ಕಾರ್ಡ್ ವಿತರಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರಗತಿ ಪರ ಕೃಷಿಕ, ಕೃಷಿ ಸಾಧಕರಾದ ಪ್ರಭಾಕರ ಮಯ್ಯ ಇವರು ಪ್ರಾತ್ಯಕ್ಷಿತೆ ಮೂಲಕ ರೈತರಿಗೆ ಮಾಹಿತಿ ನೀಡಿದರು.

NRLM ಯೋಜನೆ ಬಗ್ಗೆ ಬೆಳ್ತಂಗಡಿ ತಾಲೂಕು ನ ಮೇಲ್ವಿಚಾರಕರಾದ ಜಯಾನಂದ ಇವರು ಸಂಜೀವಿನಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಉಜಿರೆ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಇವರು ಇಲಾಖೆಯ ಮಾಹಿತಿ ಮತ್ತು ಸವಲತ್ತು ಪಡೆದುಕೊಂಡು ಉತ್ತಮ ಕೃಷಿಕರಾಗುವಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ಶುಭ ಹಾರೈಸಿದರು.

ಪ್ರೇರಣಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿನುತ ರಜತ್ ಗೌಡ ಅಧ್ಯಕ್ಷತೆ ವಹಿಸಿದ್ದು ವೇದಿಕೆಯಲ್ಲಿ ಜಿಲ್ಲಾ ರೈತ ತರಬೇತಿ ಕೇಂದ್ರ ATM ಕುಸುಮ ಇವರು ಉಪಸ್ಥಿತರಿದ್ದರು.ಕವಿತಾ ಪ್ರಾರ್ಥನೆ ಮಾಡಿದರು ಕೃಷಿ ಸಖಿ ಭಾಗಿರಥಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

ಒಕ್ಕೂಟದ MBK ಸಂಧ್ಯಾ ಸ್ವಾಗತಿಸಿ LCRP ಶಾಶ್ವಿತ ವಂದಿಸಿದರು. ಸಿಬ್ಬಂದಿಗಳಾದ ಏಕಲತ, ಚಂದ್ರಿಕಾ, ಅಶ್ವಿನಿ ಸಹಕರಿಸಿದರು.

LEAVE A REPLY

Please enter your comment!
Please enter your name here