






‘ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದ ಉದ್ದೇಶವನ್ನು ಮೊದಲಾಗಿ ತಿಳಿದುಕೊಳ್ಳಬೇಕು ಅದರೊಂದಿಗೆ ಸಮಾಜದೊಂದಿಗಿನ ತನ್ನ ಪಯಣಕ್ಕೆ ಬೇಕಾಗುವ ಅಗತ್ಯ ಜ್ಞಾನವನ್ನು ಅರಿತುಕೊಳ್ಳಬೇಕು ಅ ಕುರಿತಾಗಿ ವಿಶೇಷ ಹಂಬಲವೂ ಬೇಕು. ಹಾಸ್ಟೆಲ್ ಜೀವನವನ್ನು ಸದುಪಯೋಗಪಡಿಸಿ ಆದರ್ಶ ವಿದ್ಯಾರ್ಥಿಯಾಗಬೇಕು. ಉಪನ್ಯಾಸಕರ ಜೊತೆ ನಯ ವಿನಯತೆಯಿಂದ ವರ್ತಿಸುವ ಗುಣ ಬೆಳೆಸಿಕೊಳ್ಳಬೇಕು.
ನಮ್ಮ ವರ್ತನೆ ಸಂಸ್ಥೆಯ ಪ್ರತಿಬಿಂಬದಂತೆ, ಬೆಳೆಸಿದ ಹೆತ್ತವರಿಗೆ,ಕಲಿಸಿದ ಗುರುಗಳಿಗೆ ಸದಾ ವಿಧೇಯರಾಗಿರಿಯೆಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಬಾರ್ಕುರಿನ ‘ಸುಜ್ಞಾನ’ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್, ವಿದ್ಯಾರ್ಥಿಯು ಉನ್ನತ ಮಟ್ಟಕ್ಕೆ ಏರುವುದು ಎಲ್ಲರ ಜೊತೆ ನಮ್ರತೆಯಿಂದ ವರ್ತಿಸಿದ ಸಮಯದಲ್ಲಿ ಮಾತ್ರ ಎಂದು ಹೇಳಿದರು.
ವೇದಿಕೆಯಲ್ಲಿ ಆಂಗ್ಲ ವಿಭಾಗದ ಮುಖ್ಯಸ್ಥೆ ಭವ್ಯಶ್ರೀ ಉಪಸ್ಥಿತರಿದ್ದರು.ಆಂಗ್ಲ ಉಪನ್ಯಾಸಕ ಪಾರ್ಶ್ವನಾಥ ಹೆಗ್ಡೆ ಸ್ವಾಗತಿಸಿ,ನಿರೂಪಿಸಿದರು









