






ಬೆಳ್ತಂಗಡಿ: ಬಂಗಾಡಿ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ಚಂದ್ರಕಾಂತ್ ಗೌಡ ಅವರು ಜು.31 ರಂದು ಸೇವೆಯಿಂದ ನಿವೃತ್ತರಾದರು. ಅವರಿಗೆ ಆ.01 ರಂದು ಮುಖ್ಯ ಕಚೇರಿ ಬಂಗಾಡಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.ಪ್ರಸ್ತುತ ಕಡಿರುದ್ಯಾವರದಲ್ಲಿ ವಾಸಿಸುತ್ತಿರುವ ಡೊಂಬ ಗೌಡ – ಲೋಕ ದಂಪತಿಯ ಪುತ್ರರಾದ ಚಂದ್ರಕಾಂತ್ ಗೌಡ ಅವರು ಮಿತ್ತಬಾಗಿಲಿನಲ್ಲಿ ಶಾಖಾ ವ್ಯವಸ್ಥಾಪಕರಾಗಿ ಸೇವೆಗೆ ಸೇರ್ಪಡೆಯಾಗಿದ್ದರು. ನಂತರ ನಾವೂರು, ಕನ್ಯಾಡಿ, ಕಡಿರುದ್ಯಾವರ, ಕುಕ್ಕಾವು ಸಂಘಗಳಲ್ಲಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು.

ಕಳೆದ 5 ವರ್ಷಗಳಿಂದ ಬಂಗಾಡಿ ಮುಖ್ಯ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಒಟ್ಟು 35 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ.



ಗೌರವ ಸಮರ್ಪಣೆ ಬೀಳ್ಕೊಡುಗೆ ಸಮಾರಂಭದಲ್ಲಿ ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್, ಉಪಾಧ್ಯಕ್ಷ ಆನಂದ ಗೌಡ, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್, ನೂತನ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಬಾಲಕೃಷ್ಣ ಕೆ., ಬಂಗಾಡಿ ಡಾ. ಶಿವರಾಜ್ ಅಜಿಲ, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಚಂದ್ರಕಾಂತ್ ಗೌಡ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಅವರ ಪ್ರಾಮಾಣಿಕತೆ ಮತ್ತು ಜನಪರ ಸೇವೆಯನ್ನು ಅಧ್ಯಕ್ಷರು ಕೊಂಡಾಡಿದರು. ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.









