






ಬೆಳ್ತಂಗಡಿ:ತಾಲೂಕಿನ ಶಿರ್ಲಾಲು ಗ್ರಾಮ ಪೆರಾಲ್ದಾಡಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಡೆಗೋಡೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ. ಮತ್ತಷ್ಟು ಕುಸಿತದ ಭಯದಿಂದ ಸ್ಥಳೀಯರು ಆತಂಕಗೊಂಡಿದ್ದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಮಳೆಯನ್ನು ಲೆಕ್ಕಿಸದೆ ರೈನ್‌ಕೋಟ್ ಧರಿಸಿ ತುರ್ತು ದುರಸ್ತಿ ಕಾರ್ಯ ನಡೆಸಿದರು.


ಕುಸಿದ ಭಾಗಕ್ಕೆ ತಾತ್ಕಾಲಿಕವಾಗಿ ಕಲ್ಲು-ಮಣ್ಣು ಹಾಕಿ, ಬೇಲಿ ಅಳವಡಿಸಿ ಅಪಾಯವನ್ನು ತಡೆದರು.ಮತ್ತಷ್ಟು ಹಾನಿಯಾಗದಂತೆ ತಡೆಗಟ್ಟಲು ಶಾಶ್ವತ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.









