






ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ 32ನೇ ವರ್ಷದ ಜ್ಞಾನ ಚಂದನ ಮತ್ತು ಜ್ಞಾನ ನಂದನ 2026ನೇ ಸಾಲಿನ *ಪುಸ್ತಕಗಳ ಲೋಕಾರ್ಪಣೆ* ಹಾಗೂ 23ನೇ ರಾಜ್ಯ ಮಟ್ಟದ ಅಂಚೆ-ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭ ಆ. 1ರಂದು ಧರ್ಮಸ್ಥಳ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯಿತು.


ಧರ್ಮಸ್ಥಳಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.ಕೊಪ್ಪ ಸ. ಪ ಪೂ. ಕಾಲೇಜು ಉಪನ್ಯಾಸಕಿ, ಸಾಹಿತಿ ಅಂಕಣಕರಾರು ದೀಪಾ ಹೀರೆಗುತ್ತಿ,ಪುಸ್ತಕಗಳ ಲೋಕಾರ್ಪಣೆ ಮಾಡಿದರು.ಚಲನಚಿತ್ರ ನಟ, ಗಾಯಕ ನಿರ್ದೇಶಕರು ನಿರ್ದೇಶಕ, ನಿರ್ಮಾಪಾಕ ಅಭಿಜಿತ್ ಪ್ರಶಸ್ತಿ ನೀಡಿ ಗೌರವಿಸಿದರು.ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. Harshendra ಕುಮಾರ್, ಕ್ಷೇಮ ವನದ ಸಿ ಇ ಓ ಶ್ರದ್ಧಾ ಅಮಿತ್, ಡಿ. ಸುಪ್ರಿಯಾ harshendara ಕುಮಾರ್, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಯು. ಜಗನ್ನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಐ. ಶಶಿಕಾಂತ್ ಜೈನ್ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿ ಶಿಕ್ಷಕಶೇಖರ್ ಕಡ್ತಲ ವಂದಿಸಿದರು.ಪುಡುವೆಟ್ಟು ಶ್ರೀ ಧ. ಮ. ಅನುದಾನಿತ ಹಿ. ಪ್ರಾ. ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧಾ ವಿಜೇತರ ಪಟ್ಟಿಯನ್ನು ಬಂಟ್ವಾಳ ದಡ್ಡಲಕಾಡು ಶಾಲಾ ಶಿಕ್ಷಕ ಚೆನ್ನಕೇಶವ ವಾಚಿಸಿದರು. ಎಸ್. ಡಿ ಎಂ ಕಲಾ ಕೇಂದ್ರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನವನ್ನು ಹಾಗೂ ನಿವೃತ್ತ ಶಿಕ್ಷಕ ಪೆರ್ಮುದೆ ಮೋಹನ್ ಕುಮಾರ್ ಕುಂಚ ಚಿತ್ರ ಮಾಡಿದರು.









