ಅಂಬಡೆಬೆಟ್ಟು ನೂತನ ಸೇತುವೆಯು ಮುಳುಗುವ ಭೀತಿಯಲ್ಲಿ ಸಂಚಾರ ಬಂದ್

0

ಉಜಿರೆ: ಅಂಬಡೆಬೆಟ್ಟು ನೂತನ ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದು ಸಂಚಾರಕ್ಕೆ ಮುಕ್ತ ವಾಗಿತ್ತು. ಜು.31ರಂದು ಸುರಿದ ಬಾರಿ ಮಳೆಗೆ ರಸ್ತೆ ಸಂಪರ್ಕ ಕಡಿದುಕೊಂಡಿದೆ. ನೂತನ ಸೇತುವೆ ನಿರ್ಮಾಣವಾದರೂ ಮುಳುಗುವ ಭೀತಿ ಎದುರಾಗಿದೆ. ನೇತ್ರಾವತಿ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಈ ಸೇತುವೆ ಮುಳುಗಿಲ್ಲ ಇಲ್ಲವಾದರೆ ಈ ಸೇತುವೆ ಇಂದು ಸುರಿದ ಮಳೆಗೆ ಮುಳುಗುತ್ತಿತ್ತು.

ಇಲ್ಲಿ 2.5ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಇಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ತಾತ್ಕಾಲಿಕ ರಸ್ತೆ 3ಸಲ ಸುರಿದ ಭಾರಿ ಮಳೆಗೆ ತಾತ್ಕಾಲಿಕ ರಸ್ತೆ ಕೊಚ್ಚಿಕೊಂಡು ಹೋಗಿ ಈ ಭಾಗದ ಜನರಿಗೆ 2ತಿಂಗಳು ಬಹಳಷ್ಟು ತೊಂದರೆ ಅನುಭವಿಸಿದ್ದರು. ಜು.23ರಂದು ನೂತನ ಸೇತುವೆಗೆ ಸಂಪರ್ಕ ಕಲ್ಪಿಸಿ ಸೇತುವೆ ಮೇಲೆ ಸಂಚಾರಿಸಲು ಗುತ್ತಿಗೆದಾರರು ಅನುವು ಮಾಡಿಕೊಟ್ಟಿದ್ದರು. ಆದರೆ ರಸ್ತೆ ಕಾಮಗಾರಿ ಪೂರ್ಣವಾಗದ ಹಿನ್ನೆಲೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

LEAVE A REPLY

Please enter your comment!
Please enter your name here