






ಬಿ ಎಂ ಎಸ್ ರಿಕ್ಷಾ ಚಾಲಕ ಸಂಘ ಬೆಳ್ತಂಗಡಿ ತಾಲೂಕು ಇದರ 39ನೇ ಕ್ಷೇಮ ನಿಧಿಯನ್ನು ನಾರಾವಿ ರಿಕ್ಷಾ ಪಾರ್ಕ್ ನ ಸದಸ್ಯರಾದ ಇತ್ತೀಚಿಗೆ ಮೃತರಾದ ರವಿ ಸಾಲಿಯಾನ್ ಅವರ ಪತ್ನಿ ಜ್ಯೋತಿಯವರಿಗೆ ಬಿಎಂಎಸ್ ರಿಕ್ಷಾ ಚಾಲಕ ಸಂಘ ವೇಣೂರು ಇದರ ಮಹಾಸಭೆಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ಬಿಎಂಎಸ್ ನ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ಕೃಷ್ಣಬೆಳಾಲು ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಎ. ಜೈ ರಾಜ್ ಸಾಲಿಯಾನ್, ಜಿಲ್ಲಾ ಅದ್ಯಕ್ಷರಾದ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಾಂತಿ ಮಾರ್ಟಿಸ್, ಸಂಘದ ಕೋಶಾಧಿಕಾರಿ ಪ್ರಶಾಂತ್ ಗರ್ಡಾಡಿ ಹಾಗೂ ವೇಣೂರು ವಲಯ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ವಸಂತ ಮಡಿವಾಳ ಉಪಸ್ಥಿತರಿದ್ದರು.


ಈ ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಸ್ಥಾಪಕ ಅಧ್ಯಕ್ಷರಾದ ಸತೀಶ್ ಹೆಗ್ಡೆ ನೆರವೇರಿಸಿದರು ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ನೇಮಯ್ಯ ಕುಲಾಲ್ ಹಾಗೂ ಜನಾರ್ಧನ ಕುಕ್ಕೇಡಿ ಉಪಸ್ಥಿತರಿದ್ದರು









