







ಬೆಳ್ತಂಗಡಿ: ಅತ್ಯಂತ ಸಜ್ಜನ ವ್ಯಕ್ತಿಯಾಗಿ ಜೀವನವನ್ನು ನಡೆಸಿ ವೃತ್ತಿ ಮತ್ತು ಪ್ರವೃತ್ತಿಗಳ ಎರಡರಲ್ಲಿಯೂ ಅಪೂರ್ವ ಸಾಧನೆ ಮಾಡಿದ ಕಣಿಯೂರು ಚಂದ್ರಯಾಚಾರ್ಯರ ಆದರ್ಶ ಅನುಕರಣೀಯವಾದುದೆಂದು ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಮ್ಯಾನೇಜರ್, ಯಕ್ಷಗಾನ ಕಲಾವಿದ ಉಮೇಶ ಆಚಾರ್ಯ ಕಾವೂರು ತಿಳಿಸಿದರು.
ಖ್ಯಾತ ಕಲಾವಿದ ಮಾರೂರು ಮಂಜುನಾಥ ಭಂಡಾರಿ ಅವರ ಶಿಷ್ಯನಾಗಿ ಅರ್ಥಗಾರಿಕೆಯಲ್ಲಿ ಪಳಗಿದ ಇವರು ಅಪೂರ್ವ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಲೆಮರೆಯ ಕಾಯಿಯಂತೆ ಇದ್ದ ಇವರನ್ನು 2011ರಲ್ಲಿ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನವು ಸನ್ಮಾನಿಸಿದ್ದು ಅವರಿಗೆ ಸಂದ ಗೌರವವಾಗಿದೆ. ಉಪ್ಪಿನಂಗಡಿಯ ಸುಧೀಂದ್ರ ಕಲಾಭವನದಲ್ಲಿ ಜರಗಿದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ರಾಷ್ಟ್ರಪ್ರಶಸ್ತಿ ಪುರಸ್ಕೃತ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ಸಾತ್ವಿಕ ಸ್ವಭಾವಕ್ಕೆ ಮಾದರಿಯಾಗಿದ್ದ ಇವರು ಪ್ರತಿಯೊಬ್ಬರಲ್ಲು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಚಂದ್ರಯಾಚಾರ್ಯರ ಪತ್ನಿ ಭವಾನಿ, ಪುತ್ರಿ ಶುಭಾ,ಪುತ್ರರಾದ ಪ್ರದೀಪ, ಪ್ರಕಾಶ್ ಮತ್ತು ಬಂಧು ವರ್ಗದವರು ಉಪಸ್ಥಿತರಿದ್ದರು.ಕಲಾವಿದ ಮಾಣಿ ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.









