







ಬೆಳ್ತoಗಡಿ: ಬೆಳ್ತಂಗಡಿ ಬಸ್ ನಿಲ್ದಾಣ ಮುಂಭಾಗ ಹೆಚ್.ಎಲ್.ಹೆಗ್ಡೆ. ಕಾಂಪ್ಲೆಕ್ಸ್ ನಲ್ಲಿ ದಕ್ಷ ಜೈನ್ ರವರ ನೂತನ ವಕೀಲರ ಕಛೇರಿ ಜು.15ರಂದು ಶುಭಾರಂಭಗೊoಡಿತು.


ಕಛೇರಿ ಉದ್ಘಾಟನೆಯನ್ನು ಖ್ಯಾತ ಹಿರಿಯ ನ್ಯಾಯವಾದಿ ಬಿ.ಕೆ. ಧನಂಜಯ ರಾವ್ ನೆರವೇರಿಸಿ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೋ, ಕಾರ್ಯದರ್ಶಿ ಪ್ರಶಾಂತ್ ಎಂ., ಉಪಾಧ್ಯಕ್ಷ ಶ್ರೀನಿವಾಸ್ ಗೌಡ, ಕಟ್ಟಡ ಮಾಲಕರಾದ ರಾಜಶೇಖರ ಅಜ್ರಿ, ಹಿರಿಯ ವಕೀಲರಾದ ರತ್ನವರ್ಮ ಬುಣ್ಣು, ಹಿರಿಯ ವಕೀಲರ ಸಮಿತಿಯ ಸದಸ್ಯ ಶಶಿಕಿರಣ್ ಜೈನ್, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ., ಅನಿಲ್ ಕುಮಾರ್ ಯು., ವಕೀಲರ ಸಂಘದ ನಿಕಟ ಪೂರ್ವ ಕಾರ್ಯದರ್ಶಿ ನವೀನ ಬಿ.ಕೆ., ಹಿರಿಯ ವಕೀಲ ಪ್ರಸಾದ್ ಕೆ. ಎಸ್., ಶಂಭು ಭಟ್ ಶಕುಂತಲಾ ಜೈನ್, ಸುಜಾತ, ಪ್ರಸನ್ನ ಕುಮಾರ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಾಹಿತಿ ಪಾಶ್ವನಾಥ ಜೈನ್ ಕಾರ್ಯಕ್ರಮ ನಿರೂಪಿಸಿದರು.









