







ಉಜಿರೆ : ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ 51ನೇ ವಾರ್ಷಿಕ ಮಹಾಸಭೆಯು ಜು.13ರಂದು ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷ ಸೀತಾರಾಮ ಗೌಡ, ಕಾರ್ಯದರ್ಶಿಯಾಗಿ ಮೋಹನ್ ಆಯ್ಕೆಯಾದರು.


ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಮಾಧವ ಗೌಡ,ಜೊತೆ ಕಾರ್ಯದರ್ಶಿ ರಾಜೇಶ್ವರಿ ಚಂದ್ರಕಾಂತ, ಕೋಶಾಧಿಕಾರಿಯಾಗಿ ಭಗೀರಥ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪುಷ್ಪ ವಿಶ್ವನಾಥ ಗೌಡ, ಶ್ರೀಧರ ಶೆಟ್ಟಿ, ಕೃಷ್ಣ ಪ್ರಸಾದ್, ಗಿರೀಶ್, ಯಾದವ ಕುಲಾಲ್ ರಮೇಶ್ ಗೌಡ, ಶೈಲೇಶ್, ಮನೀಶ್, ಮೋಕ್ಷಿತ್ ಚಂದ್ರಶೇಖರ, ವಿಠಲ ನಾಯ್ಕ ಶ್ರೀಧರ ಬಂಗೇರ, ಶೀನಪ್ಪ ಗೌಡ, ವಿಘ್ನೇಶ್, ತಾರಾನಾಥ, ನಾರಾಯಣ ಪೂಜಾರಿ, ಚಂದ್ರಕಾಂತ ಗೌಡ, ಭಾರತಿ ವೆಂಕಟರಮಣ ಗೌಡ, ಸೇವಂತಿ ನಿರಂಜನ್,ಸಲಹಾ ಸಮಿತಿ ಸದಸ್ಯರುಗಳಾಗಿ ಧರ್ಣಪ್ಪ ಗೌಡ, ಬೇಬಿ ಪೂಜಾರಿ ಕೂಸಪ್ಪ ಗೌಡ, ಪೂವಪ್ಪ ನಾಯ್ಕ ಇವರನ್ನು ಆಯ್ಕೆ ಮಾಡಲಾಯಿತು.
ಮಾಧವ ಗೌಡ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಶೈಲೇಶ್ ಧನ್ಯವಾದವಿತ್ತರು.









