







ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಕೃಪಾಶ್ರಯದಲ್ಲಿ ಆರೋಹಣ ತಂಡದ “ಉಜಿರೆ ಪಿಲಿ ರಂಗ್ -2026 ” ಹುಲಿವೇಷ ಕುಣಿತ ತಂಡವನ್ನು ಜು 12 ರಂದು ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಏರ್ಪಡಿಸಲಾದ ” ರೈನಥಾನ್ -2026 “ವೇದಿಕೆಯಲ್ಲಿ ಗಣ್ಯ ಅತಿಥಿಗಳು ವಿದ್ಯುಕ್ತವಾಗಿ ಉದ್ಘಾಟಿಸಿ ಚಾಲನೆ ನೀಡಿದರು.


ಡಿ ವೈ ಎಸ್ ಪಿ ರೋಹಿಣಿ,ಅಡಿಷನಲ್ ಎಸ್ ಪಿ ಅನಿಲ್ ಕುಮಾರ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ,ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್ , ಪ್ರಾಂಶುಪಾಲ ಪ್ರೊ!ವಿಶ್ವನಾಥ ಪಿ.,ರಕ್ಷಿತ್ ಶಿವರಾಂ,ಸೋನಿಯಾ ವರ್ಮಾ,ಕಿರಣಚಂದ್ರ ಪುಷ್ಪಗಿರಿ, ಪೂರನ್ ವರ್ಮಾ, ಪ್ರತಾಪಸಿಂಹ ನಾಯಕ್,ಪ್ರಕಾಶ್ ಪ್ರಭು, ಸುಮಂತ್ ಕುಮಾರ್ ಜೈನ್ ಮತ್ತು ಆರೋಹಣ ತಂಡದ ಸದಸ್ಯರು ಉಪಸ್ಥಿತರಿದ್ದರು. ನ್ಯಾಯವಾದಿ ಧನಂಜಯ ರಾವ್ ಬಿ.ಕೆ.ಕಾರ್ಯಕ್ರಮ ನಿರೂಪಿಸಿದರು









