







ಬೆಳ್ತಂಗಡಿ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಇದರ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷರಾದ ಶ್ರೀಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಜು. 11 ರಂದು ಧರ್ಮಸ್ಥಳಕ್ಕೆ ಬೇಟಿ ನೀಡಿ, ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರನ್ನು ಸಂದರ್ಶಿಸಿದರು.


ಇತ್ತೀಚಿಗೆ ಬಿಡುಗಡೆಗೊಂಡ ವೈದ್ಯ ಸಾಹಿತಿ ಡಾಕ್ಟರ್ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ಅವರ ಸಂಪಾದಕತ್ವದಲ್ಲಿ ಕರ್ನಾಟಕ ರಾಜ್ಯ ವೈದ್ಯ ಬರಹಗಾರರ ಬಳಗದ ಆಶ್ರಯದಲ್ಲಿ ಮೂಡಿ ಬಂದು, ವೈದ್ಯಕೀಯ ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನದ ಮೂಡಿಸಿದ “ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ” ಪುಸ್ತಕವನ್ನು ಪೂಜ್ಯರೀಗೆ ನೀಡಲಾಯಿತು.

ಡಾ ಅಣ್ಣಯ್ಯ ಕುಲಾಲ್ ಅವರ ಜೊತೆ ನಿವೃತ್ತ ಕಂದಾಯ ನಿರೀಕ್ಷಕ ಎಚ್ ಪದ್ಮಕುಮಾರ್, ಹರೀಶ ಕಾರಿಂಜ, ಕೇಶವ ಕುಲಾಲ್ ಚಾರ್ಮಾಡಿ, ಹಾಗೂ ಕುಟುಂಬದವರು ಉಪಸ್ಥಿತರಿದ್ದರು.









