







ಬೆಳ್ತಂಗಡಿ :ಕಡಮಗುಂಡಿ ಪ್ರಕೃತಿ ಪ್ರಿಯರಿಗೆ ಮತ್ತು ಪ್ರವಾಸೋದ್ಯಮ ವಲಯಕ್ಕೆ ಒಂದು ಮಹತ್ವದ ಸುದ್ದಿಯಾಗಿದೆ. ಕಳೆದ ಕೆಲವು ದಿನಗಳಿಂದ ಮುಚ್ಚಲಾಗಿದ್ದ ಪ್ರಸಿದ್ಧ ಕಡಮಗುಂಡಿ ಜಲಪಾತವು, ನಾಳೆಯಿಂದ(ಜು. 11) ಅಧಿಕೃತವಾಗಿ ಸಾರ್ವಜನಿಕರ ವೀಕ್ಷಣೆಗೆ ಮತ್ತೆ ತೆರೆದುಕೊಳ್ಳಲಿದೆ.


ಮರು ಆರಂಭ: ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ನಿರ್ವಹಣಾ ಕಾರ್ಯಗಳಿಗಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಪ್ರವೇಶವನ್ನು ನಾಳೆಯಿಂದ ಪುನರಾರಂಭಿಸಲಾಗುತ್ತಿದೆ. ಅದೇ ರೀತಿ ನೇತ್ರಾವತಿ ಚಾರಣವನ್ನು ಕೂಡ ಮತ್ತೆ ತೆರೆಯಲಾಗಿದೆ.









