







ಉಜಿರೆ : ಉಜಿರೆಯ ಕನಸಿನ ಮನೆಯ ಲಕ್ಷ್ಮಿ ಗ್ರೂಪ್ ಮಾಲಕಸಮಾಜ ಸೇವಕ ಕೆ.ಮೋಹನ್ ಕುಮಾರ್ ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ನಡೆಯುತ್ತಿರುವ ಹರಿ ಓಂ ಬಾಲ ಸಂಸ್ಕಾರ ಕೇಂದ್ರದ 45 ಮಕ್ಕಳಿಗೆ ಬರೆಯುವ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.


ಕಾರ್ಯಕ್ರಮದಲ್ಲಿ ಬಾಲ ಸಂಸ್ಕಾರ ಕೇಂದ್ರದ ಸಂಯೋಜಕಕೆ ಮಂಜುನಾಥ ಶೆಟ್ಟಿ ನಿಡಿಗಲ್,ಕೇಂದ್ರದ ಮಾರ್ಗದರ್ಶಕಿ ಸುಧಾ ಕಾಮತ್, ಚಂದ್ರಿಕಾ ಅಶೋಕ ಗೌಡ,ರಘು ಲಿಂಗಾಯತ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.









