ನಿವೃತ್ತ ಆರೋಗ್ಯ ಅಧಿಕಾರಿ ಬಿ. ಜಗನ್ನಾಥ ಪೂಜಾರಿ ಆರ್ಲ ಅವರ ಶ್ರದ್ಧಾಂಜಲಿ ಸಭೆ

0

ಕಲ್ಮಂಜ : ನಿವೃತ್ತ ಆರೋಗ್ಯ ಇಲಾಖಾಧಿಕಾರಿ ಬಿ. ಜಗನ್ನಾಥ ಪೂಜಾರಿ ಆರ್ಲ ಅವರು ಜೂ.26 ರಂದು ನಿಧನರಾಗಿದ್ದು, ಅವರ ನೆನಪಿನಲ್ಲಿ ಜು. 08 ರಂದು ಆರ್ಲ ಮನೆಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಮೃತರೊಂದಿಗೆ ಇದ್ದ ನೆನಪುಗಳನ್ನು ಹಂಚಿಕೊಂಡರು. ಸ್ನೇಹಪರತೆ, ಸರಳತೆ ಮತ್ತು ಸೇವಾ ಮನೋಭಾವದಿಂದ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ತುಕಾರಾಮ್ ಸಾಲಿಯಾನ್ ಮಾತನಾಡಿ, “ಜಗನ್ನಾಥ ಪೂಜಾರಿ ಅವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಸಾರ್ವಜನಿಕರಿಗೆ ತೋರಿದ ಕಾಳಜಿ ಮತ್ತು ಪ್ರಾಮಾಣಿಕತೆ ಮಾದರಿಯಾಗಿದೆ” ಎಂದು ಹೇಳಿದರು.ನಂತರ 2 ನಿಮಿಷ ಮೌನಾಚರಣೆ ಮಾಡಿ ಅಗಲಿದ ದಿವ್ಯಾತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು.

ಮಕ್ಕಳಾದ ಪ್ರವೀಣ್ ಬಿ. ಪ್ರಮೋದ್, ಹಾಗೂ ಕುಟುಂಬಸ್ಥರಾದ ಸುಮಿತ್ರ, ವಿಜಯ, ಅಖಿಲಾ, ಅವಿನಾಶ್ ಕಾರ್ಕಳ, ಬೇಬಿ ಅವಿಕಾ, ಅಂಕಿತಾ, ಅಶ್ಮಿತಾ ಎ, ಮತ್ತು ಕುಟುಂಬಸ್ಥರು, ಬಂಧುಮಿತ್ರರು, ಹಾಗೂ ಸ್ಥಳೀಯ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here