ಅತ್ಯುತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಹರೀಶ್ ಪೂಂಜಾರಿಗೆ ಗಾರ್ಡಡಿ ಸಂತ ಸಬಾಸ್ಟಿನ್ ಚರ್ಚ್ ಸಮುದಾಯದಿಂದ ಅಭಿನಂದನೆ

0

​ಬೆಳ್ತಂಗಡಿ: ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ‘ಅತ್ಯುತ್ತಮ ಶಾಸಕ’ ಪ್ರಶಸ್ತಿಯನ್ನು ಪಡೆದಿರುವ, ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಅಭಿವೃದ್ಧಿಯ ಹರಿಕಾರ ಹರೀಶ್ ಪೂಂಜಾ ಅವರನ್ನು ಗಾರ್ಡಡಿ ಸಂತ ಸಬಾಸ್ಟಿನ್ ಚರ್ಚಿನ ಕ್ರೈಸ್ತ ಸಮುದಾಯವು ಅಭಿನಂದಿದರು.​

ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆತಮ್ಮ ಜನಪರ ಕೆಲಸಗಳ ಮೂಲಕ ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಾಸಕ ಹರೀಶ್ ಪೂಂಜಾ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಕ್ಷೇತ್ರದ ಜನತೆಗೆ ಹೆಮ್ಮೆಯ ವಿಷಯವಾಗಿದೆ.

ಈ ಸಾಧನೆಯನ್ನು ಗುರುತಿಸಿ, ಗಾರ್ಡಡಿ ಸಂತ ಸಬಾಸ್ಟಿನ್ ಚರ್ಚಿನ ಕ್ರೈಸ್ತ ಸಮುದಾಯದವರು ಶಾಸಕರನ್ನು ಭೇಟಿ ಮಾಡಿ, ಅವರ ಸೇವೆಯನ್ನು ಶ್ಲಾಘಿಸಿ ಶುಭಾಶಯಗಳನ್ನು ಕೋರಿದರು.​

ಸಂತ ಸೆಬಸ್ಟಿನ್ ಚರ್ಚಿನ ಧರ್ಮಗುರು ಸುದೀಪ್ ಸಂತಾನ್ ಗೊಸ್ವಾಲೀಸ್,ಉಪಾಧ್ಯಕ್ಷ ಸ್ಟಿವನ್ ಮೋನಿಸ್ , ಕಾರ್ಯದರ್ಶಿ ಫ್ಲಾವಿಯ ಮೋರಸ್ , ಆಯೋಗದ ಸಂಯೋಜಕಿ ಮೇಬಲ್ ಕ್ರಾಸ್ತ, ಕ್ಯಾಥೋಲಿಕ್ ಸಭಾ ಬೆಳ್ತಂಗಡಿ ವಲಯ ಅಧ್ಯಕ್ಷ ಆಲ್ಬರ್ಟ್ ಸುನಿಲ್ ಮೋನಿಸ್ ಹಾಗೂ ಚರ್ಚಿನ ಪಾಲನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here