









ಬೆಳ್ತಂಗಡಿ: ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ `BEST MLA` ಪ್ರಶಸ್ತಿ ಪಡೆದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರಿಗೆ ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ಕಾರ್ಯಕರ್ತರು ಸ್ವಗೃಹ “ಮಿಥಿಲಾ” ದಲ್ಲಿ ಜು. 08 ರಂದು ಗೌರವ ಸಲ್ಲಿಸಿದರು.ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಕಾಂತ್ ಎಸ್ ಇಂದಬೆಟ್ಟು ಅವರ ನೇತೃತ್ವದಲ್ಲಿ ಈ ಗೌರವ ಕಾರ್ಯಕ್ರಮ ನಡೆಯಿತು.”ಬೆಳ್ತಂಗಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಶಾಸಕರ ಅವಿರತ ಶ್ರಮದ ಫಲ. ಪ್ರತಿ ಗ್ರಾಮದ ಜನತೆಯ ಮನೆ ಮತ್ತು ಮನ ಮುಟ್ಟುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಿಕ್ಕ BEST MLA ಪ್ರಶಸ್ತಿ ಬೆಳ್ತಂಗಡಿ ತಾಲೂಕಿನ ಪ್ರತಿಯೊಬ್ಬ ಪ್ರಜೆಗೂ ಸಿಕ್ಕ ಗೌರವವಾಗಿದೆ” ಎಂದು ಕಾರ್ಯಕರ್ತರು ತಿಳಿಸಿದರು.2028 ರಲ್ಲಿ ಮತ್ತೊಮ್ಮೆ ಜನರ ಬಹುಮತದೊಂದಿಗೆ ಆಯ್ಕೆಯಾಗಿ ಸಚಿವರಾಗಿ, 5 ವರ್ಷಗಳ ಹಿಂದಿನ ಅಭಿವೃದ್ಧಿ ವೇಗ ಮರುಕಳಿಸಿ ಬೆಳ್ತಂಗಡಿಯನ್ನು ಮಾದರಿ ತಾಲೂಕಾಗಿ ರೂಪಿಸಲಿ ಎಂದು ದೇವನಾರಿ ಶ್ರೀ ಅರ್ಧನಾರೀಶ್ವರ ಸ್ವಾಮಿ ಹಾಗೂ ಬಂಗಾಡಿ ಉಳ್ಳಾಕುಳ ದೈವದ ಆಶೀರ್ವಾದ ಕೋರಿದರು.ಗ್ರಾ.ಪಂ ಮಾಜಿ ಅಧ್ಯಕ್ಷೆ ಆಶಾಲತಾ ನಿಕಟಪೂರ್ವ ಅಧ್ಯಕ್ಷ ಆನಂದ ಅಡಿಲು, ಸದಸ್ಯರಾದ ಪ್ರಮೋದ್ ಕುಮಾರ್, ಸತೀಶ್ ಬೆದ್ರಬೆಟ್ಟು, ಬೂತ್ ಅಧ್ಯಕ್ಷರಾದ ಶಿಧರ ಗೌಡ ಪಡೆಂಕ್ಕಲ್, ಸಂಜೀವ ಗೌಡ ದರ್ಖಸು, ನಿತೇಶ್ ಕಡಿತ್ಯಾರು, ನವೀನ್ ಜೈನ್, ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ಪ್ರತೀಶ್ ಕಡಿತ್ಯಾರು ಯುವ ಮೋರ್ಚಾ ಸಂತೋಷ್ ಉಂಬೇಜೆ ರೈತ ಮೋರ್ಚಾ ಪಳನಿ ಸ್ವಾಮಿ, ಹಾಲಿನ ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಕಾಂಜಾನು, ಆದಿಚುಂಚನಗಿರಿ ಮಠದ ಅರ್ಚಕ ಶ್ರೀನಾಥ್ ಸೋಮಯ್ಯದಡ್ಡು ಸೇರಿದಂತೆ ಅನೇಕ ಹಿರಿಯ-ಕಿರಿಯ ಕಾರ್ಯಕರ್ತರು ಭಾಗವಹಿಸಿದ್ದರು.?









