ಸುರಕ್ಷತಾ ಕ್ರಮ ಹಾಗೂ ಚಾರಣಿಗರ ಹಿತದೃಷ್ಟಿಯಿಂದ ಗಡಾಯಿಕಲ್ಲು ಚಾರಣಕ್ಕೆ ಜುಲೈ 8ರಿಂದ ನಿರ್ಬಂಧ

0

ಬೆಳ್ತಂಗಡಿ : ನಡ ಗ್ರಾಮದ ಚಾರಣ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ಜುಲೈ 8ರಿಂದ ನಿರ್ಬಂಧ ವಿಧಿಸಲಾಗಿದೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಹಾಗೂ ಚಾರಣಿಗರ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ವನ್ಯಜೀವಿ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಶರ್ಮಿಷ್ಟಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಜಾರುವ ಕಲ್ಲುಗಳು ಮತ್ತು ಜನದಟ್ಟಣೆಯಿಂದ ಅಪಾಯದ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜುಲೈ 8 ರ ನಂತರದ ಎಲ್ಲಾ online ಬುಕಿಂಗ್ ಗಳು ರದ್ದುಹವಾಮಾನ ಮತ್ತು ಪರಿಸ್ಥಿತಿ ಸುಧಾರಿಸಿದ ನಂತರವಷ್ಟೇ ಮತ್ತೆ ತೆರೆಯಲಾಗುವುದು.ದಯವಿಟ್ಟು ಪ್ರವಾಸಿಗರು ಸಹಕರಿಸಿ. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಅರಣ್ಯ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.

LEAVE A REPLY

Please enter your comment!
Please enter your name here