ಧರ್ಬೆತ್ತಡ್ಕ ಪರಶುರಾಮ ದೇವಸ್ಥಾನ ಬಳಿ ವಿದ್ಯುತ್ ಕಂಬ ಉರುಳಿ ಸಭಾಭವನಕ್ಕೆ ಹಾನಿ

0

ಧರ್ಮಸ್ಥಳ ಶೌರ್ಯ ತಂಡದ ಸದಸ್ಯ ಅವಿನಾಶ್ ಭಿಡೆಯಿಂದ ತೆರವು ಕಾರ್ಯ ಅರಸಿನಮಕ್ಕಿ, ಜು. 5: ಧರ್ಬೆತ್ತಡ್ಕದ ಪರಶುರಾಮ ದೇವಸ್ಥಾನದ ಸಮೀಪ ಭಾನುವಾರ ಸುರಿದ ಭಾರೀ ಗಾಳಿ-ಮಳೆಗೆ ಮರ ಉರುಳಿ ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ, ವಿದ್ಯುತ್ ಕಂಬ ನೆಲಕ್ಕುರುಳಿ ದೇವಸ್ಥಾನದ ಸಭಾಭವನಕ್ಕೆ ಹಾನಿಯಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಅರಸಿನಮಕ್ಕಿ–ಶಿಶಿಲ ಘಟಕದ ಸದಸ್ಯ ಅವಿನಾಶ್ ಭಿಡೆ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು.

ತ್ವರಿತ ಕಾರ್ಯಾಚರಣೆಯಿಂದ ಸ್ಥಳದಲ್ಲಿ ಉಂಟಾಗಿದ್ದ ಅಪಾಯವನ್ನು ನಿವಾರಿಸಿ ಪರಿಸ್ಥಿತಿಯನ್ನು ಸುರಕ್ಷಿತಗೊಳಿಸಲಾಯಿತು.

LEAVE A REPLY

Please enter your comment!
Please enter your name here