ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2025-26ನೇ ಸಾಲಿನಲ್ಲಿ ರೂ.2.39 ಕೋಟಿ ಲಾಭ – ರಕ್ಷಿತ್ ಪಣೆಕ್ಕರ

0

ಬೆಳ್ತಂಗಡಿ: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ 50 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಈ ವರ್ಷ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಇದೆ.

ವಾರ್ಷಿಕವಾಗಿ ಇತರೆ ಬ್ಯಾಂಕ್‌ಗಳೊಂದಿಗೆ ಸರ್ಧಾತ್ಮಕ ಪೈಪೋಟಿಯನ್ನು ಮಾಡುತ್ತಾ ಉತ್ತಮ ಪ್ರಗತಿ ಸಾಧಿಸುತ್ತಾ ಬಂದಿದೆ. ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಸಂಘವು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈ ವರ್ಷಾಂತ್ಯದಲ್ಲಿ ನಮ್ಮ ಸಂಘ ರೂ. 5.80 ಕೋಟಿ ಪಾಲು ಬಂಡವಾಳ, ರೂ 46.59 ಕೋಟಿ ಠೇವಣಿ ಹೊಂದಿರುತ್ತದೆ. ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ರೂ.84.09 ಕೋಟಿ ಹೊರ ಬಾಕಿ ಸಾಲವಿದ್ದು, ವಾರ್ಷಿಕ ರೂ 485.02 ಕೋಟಿ ವ್ಯವಹಾರ ಮಾಡಿ, ರೂ 2.39 ಕೋಟಿ ನಿವ್ವಳ ಲಾಭಗಳಿಸಿರುತ್ತದೆ.

ಅಲ್ಲದೇ ಸತತ 33 ವರ್ಷಗಳಿಂದ ಲಾಭಪಡೆಯುತ್ತಿದ್ದು ಲೆಕ್ಕಪರಿಶೋಧನೆಯಲ್ಲಿ ಎ ಗೇಡ್ ಪಡೆದಿದೆ.

ಸಂಘವು ಸತತ ಐದು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನೀಡುವ ವಿಶೇಷ ಪ್ರೋತ್ಸಾಹ ಪ್ರಶಸ್ತಿಗೆ ಆಯ್ಕೆಯಾಗಿದೆ‌.ಈ ವರ್ಷ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ನಮ್ಮ ಸಂಘ, 2.39 ಕೋಟಿ ನಿವ್ವಳ ಲಾಭ ಗಳಿಸಿದೆ. ಮೊಗ್ರು ಗ್ರಾಮದಲ್ಲಿ ಶಾಖೆ, ಎಸ್.ಎಸ್.ಎಲ್.ಸಿ ಯಲ್ಲಿ ಪಾಸಾದ ಎಲ್ಲಾ ಮಕ್ಕಳಿಗೆ ಹಾಗೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನ ಜೊತೆಗೆ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆ ಮಾಹಿತಿ ಶಿಬಿರ ಮಾಡುವುದು. ಸಂಘದ ಸದಸ್ಯರ ತೋಟಕ್ಕೆ ಸಿಡಿಲು ಬಡಿತ ಅಥವಾ ಆನೆ ದಾಳಿಯಿಂದ ಹಾನಿ ಆದಾಗ ಪರಿಹಾರ ಧನ ನೀಡುತಿದ್ದೇವೆ.ಕ್ರೀಡಾಕೂಟ, ಶಾಲಾ ಕಾಲೇಜು, ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನಗಳಿಗೆ ಆರ್ಥಿಕ ಸಹಾಯ ನೀಡುತಿದ್ದೇವೆ.ತೀವ್ರ ಬಡತನದಲ್ಲಿರುವ ಸಂಘದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ನೀಡುತಿದ್ದೇವೆ.

ರಕ್ಷಿತ್ ಪಣೆಕ್ಕರ ಅಧ್ಯಕ್ಷರು ಪ್ರಾ.ಕೃ.ಪ.ಸ.ಸಂ ಪದ್ಮುಂಜ

LEAVE A REPLY

Please enter your comment!
Please enter your name here