ತೆಂಕಕಾರಂದೂರಿನಲ್ಲಿ ಎಸ್‌ಡಿಪಿಐ ವತಿಯಿಂದ SIR ಹೆಲ್ಪ್‌ಡೆಸ್ಕ್ ಸೇವೆ ಆರಂಭ

0

ತೆಂಕಕಾರಂದೂರು, ಜುಲೈ 3: ಎಸ್‌ಡಿಪಿಐ ತೆಂಕಕಾರಂದೂರು ಬ್ರಾಂಚ್ ಸಮಿತಿಯ ವತಿಯಿಂದ ಪೆರಾಲ್ದರಕಟ್ಟೆಯಲ್ಲಿ SIR (Special Intensive Revision) ಹೆಲ್ಪ್‌ಡೆಸ್ಕ್ ಸೇವೆಗೆ ಚಾಲನೆ ನೀಡಲಾಯಿತು.

ಈ ಹೆಲ್ಪ್‌ಡೆಸ್ಕ್ ಮೂಲಕ ಮತದಾರರ ಪಟ್ಟಿಗೆ ಹೊಸ ಹೆಸರು ಸೇರ್ಪಡೆ, ಹೆಸರು ಹಾಗೂ ವಿಳಾಸ ತಿದ್ದುಪಡಿ, ಮತದಾರರ ವಿವರಗಳ ಪರಿಶೀಲನೆ ಸೇರಿದಂತೆ ಮತದಾರರ ಪಟ್ಟಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾರ್ಗದರ್ಶನವನ್ನು ಸಾರ್ವಜನಿಕರಿಗೆ ಮುಂದಿನ ಒಂದು ತಿಂಗಳ ಅವಧಿಯವರೆಗೆ ಉಚಿತವಾಗಿ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಬಳಂಜ ಗ್ರಾಮ ಪಂಚಾಯತ್‌ನ ಎಸ್‌ಡಿಪಿಐ ಬೆಂಬಲಿತ ನಿಕಟಪೂರ್ವ ಸದಸ್ಯ ನಿಝಾಮ್ ಕಟ್ಟೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಅಶ್ರಫ್ ಕಟ್ಟೆ, ತೆಂಕಕಾರಂದೂರು ಬ್ರಾಂಚ್ ಅಧ್ಯಕ್ಷ ನವಾಝ್ ಮಂಜೋಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು, ನಾಗರಿಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here