ನಾನು ಯಾವುದೇ ಅನ್ಯಾಯ ಮಾಡಿಲ್ಲ-ಯಾವುದೇ ತಪ್ಪೆಸಗಿಲ್ಲ-ಪೊಲೀಸ್ ಕಾನ್ಸ್ ಸ್ಟೇಬಲ್ ಮಾಲತೇಶ್ ಸ್ಪಷ್ಟನೆ

0

ಬೆಳ್ತಂಗಡಿ: ಕರ್ತವ್ಯ ಲೋಪ ಎಸಗಿದ ಆರೋಪದಡಿ ಸೇವೆಯಿಂದ ತನ್ನನ್ನು ಎಸ್ಪಿ ಅವರು ಅಮಾನತು ಮಾಡಿ ಹೊರಡಿಸಿರುವ ಆದೇಶಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಮಾಲತೇಶ್ ಅವರು ಸ್ಪಷ್ಟನೆ ನೀಡಿದ್ದಾರೆ.

ವಾರಂಟ್ ಆರೋಪಿ ಹೇಮಂತ್ ಗೌಡ ಎಂಬಾತನನ್ನು ನಾನು ಉಪ್ಪಿನಂಗಡಿಯಲ್ಲಿ ದಸ್ತಗಿರಿ ಮಾಡಿರುತ್ತೇನೆ. ನಂತರ ಕೋರ್ಟ್ ಗೆ ಕರೆ ತಂದಾಗ ಅವರ ಸಂಬಂಧಿಕರಾದ ಚಂದ್ರಾವತಿ ಎಂಬವರು ಬಂದು ವಾರೆಂಟ್ ಆರೋಪಿಯ ಹೆಂಡತಿ ಮೃತ ಪಟ್ಟ ಬಗ್ಗೆ ನನಗೆ ಮಾಹಿತಿ ನೀಡಿದರು.

ಮಾನವೀಯತೆಯ ದೃಷ್ಟಿಯಲ್ಲಿಯೂ ನಾನು ಬಿಟ್ಟು ಕಳುಹಿಸಲಿಲ್ಲ.‌ ನ್ಯಾಯಾಲಯದಲ್ಲಿ ಹಾಜರಾದ ಬಗ್ಗೆ ನನಗೆ ಧೃಡೀಕರಣ ಪತ್ರ ಕೊಟ್ಟ ನಂತರವೇ ಬಿಟ್ಟಿರುತ್ತೇನೆ. ನಂತರ ಠಾಣಾ ಪಿಎಸ್ ಐ ಸಿಕಂದರ್ ಪಾಷಾರವರಲ್ಲಿ ನಾನು ವಾರಂಟ್ ಕರ್ತವ್ಯ ಮಾಡುವುದರಿಂದ ಇಲಾಖಾ ವಾಹನವಾದ ಕೆ ಎ 19ಜಿ 1034 ನ್ನು ನನ್ನ ಕರ್ತವ್ಯಕ್ಕೆ ಕೇಳಿರುತ್ತೇನೆ.

ನಂತರ ಇಲಾಖಾ ವಾಹನ ಸಿಕಂದರ್ ಪಾಷಾರವರೇ ಉಪಯೋಗಿಸುತ್ತಿದ್ದು ಆದರೆ ಸದ್ರಿ ಇಲಾಖಾ ವಾಹನ ಎಲ್ಲಿ ಓಡಾಡಿರುವುದಿಲ್ಲ. ಆದರೆ ಇಲಾಖೆ ಕೊಟ್ಟಿರುವ ಪೆಟ್ರೋ ಕಾರ್ಡ್ ನಿಂದ ತಮ್ಮ ಸ್ವಂತ ವಾಹನಕ್ಕೆ ಇಲಾಖೆ ನೀಡಿರುವ ಇಂದನ ದುರುಪಯೋಗ ಮಾಡಿರುತ್ತಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ಕೊಟ್ಟಿರುವುದರಿಂದ ನನ್ನ ಮೇಲೆ ಅಮಾನತು ಆದೇಶ ಮಾಡಿದ್ದಾರೆ.

ಇದರಲ್ಲಿ ನನ್ನ ಯಾವುದೇ ತಪ್ಪು ಇಲ್ಲ.ನಾನು ಕಳ್ಳತನದ ಆರೋಪಿಗಳನ್ನು ಹೊರರಾಜ್ಯಗಳಿಂದಲೂ ದಸ್ತಗಿರಿ ಮಾಡಿದ್ದು,ನಾನು ಯಾವುದೇ ಅನ್ಯಾಯ ಮಾಡಿಲ್ಲ” ಎಂದು ಮಾಲತೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here