







ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಖ್ಯಾತ ಎಲುಬು ತಜ್ಞ ಡಾ. ಶಶಿಕಾಂತ್ ಡೋಂಗ್ರೆ ಹಾಗೂ ಆಸ್ಪತ್ರೆಯ ಕಛೇರಿ ಮುಖ್ಯಸ್ಥ ರಮೇಶ್ ಅವರ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಆಸ್ಪತ್ರೆಯಲ್ಲಿ ಎಲುಬು ತಜ್ಞರಾಗಿ ಹಲವು ವರ್ಷಗಳ ಕಾಲ ಅನನ್ಯ ಸೇವೆ ಸಲ್ಲಿಸಿದ ಡಾ. ಶಶಿಕಾಂತ್ ಡೋಂಗ್ರೆ ಅವರು ಮಂಗಳೂರಿನ ಜಿಲ್ಲಾಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ. ಇವರ ಸೇವಾ ಮನೋಭಾವವನ್ನು ಸಹೋದ್ಯೋಗಿಗಳು ಈ ವೇಳೆ ಕೊಂಡಾಡಿದರು.ಅದೇ ರೀತಿ, ಆಸ್ಪತ್ರೆಯ ಕಛೇರಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಅವರು, ಪದೋನ್ನತಿ ಹೊಂದಿ ಬೆಂಗಳೂರಿನ ಜಯನಗರದ ಆಸ್ಪತ್ರೆಗೆ ಸೂಪರಿಂಟೆಂಡೆಂಟ್ ಆಗಿ ವರ್ಗಾವಣೆಗೊಂಡಿದ್ದಾರೆ. ಇವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಸನ್ಮಾನಿಸಲಾಯಿತು


ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಬ್ಬರು ಅಧಿಕಾರಿಗಳ ಸೇವೆಯನ್ನು ಸ್ಮರಿಸುತ್ತಾ, ಅವರ ಮುಂದಿನ ವೃತ್ತಿ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಶಶಾಂಕ್, ಡಾ. ರಶ್ಮಿ, ಡಾ. ಆಶಾಲತಾ, ಡಾ. ತಾರಕೇಶ್ವರಿ ಶೆಟ್ಟಿ, ಡಾ. ರಾಘವೇಂದ್ರ, ಡಾ. ವೆಂಕಟಸ್ವಾಮಿ, ಡಾ. ಸಹನ್ ಕುಮಾರ್ ಶೆಟ್ಟಿ ಹಾಗೂ ಡಾ. ದೀಕ್ಷಿತ ಉಪಸ್ಥಿತರಿದ್ದು, ಬೀಳ್ಕೊಡುಗೆ ನೀಡಿದರು









