







ಕೊಯ್ಯೂರು: ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಕಸಬಾ (ಮಲೇಬೆಟ್ಟು) ದ.ಕ.ಜಿ.ಪಂ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ಶಾಲಾ ಮಂತ್ರಿಮಂಡಲದ ರಚನೆ ನೆರವೇರಿತು.
ಜೂ. 10ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ನಾಯಕರನ್ನು ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ಆಯ್ಕೆ ಮಾಡಿದರು. ಶಾಲಾ ನಾಯಕನಾಗಿ 8ನೇ ತರಗತಿಯ ಜಿ. ತನುಷ್ ಹಾಗೂ ಉಪನಾಯಕಿಯಾಗಿ 7ನೇ ತರಗತಿಯ ಅಂಕಿತಾ ಎಂ. ಅವರು ಆಯ್ಕೆಯಾಗಿದ್ದಾರೆ.


ವಿರೋಧ ಪಕ್ಷದ ನಾಯಕನಾಗಿ 8ನೇ ತರಗತಿಯ ನಹೀಮ ಮತ್ತು ಉಪನಾಯಕಿಯಾಗಿ 7ನೇ ತರಗತಿಯ ರಿತೀಕ್ಷಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಶಿಸ್ತು ಮಂತ್ರಿ: ಗೌತಮಿ (8ನೇ), ಫಾತಿಮತ್ ತೈಬಾ (6ನೇ)ಸಾಂಸ್ಕೃತಿಕ ಮಂತ್ರಿ: ಫಾತಿಮತ್ ಶಹನಾ (8ನೇ), ಐಂದ್ರಿತಾ (6ನೇ)ಆರೋಗ್ಯ ಮಂತ್ರಿ: ಅಫ್ನಾನ್ (8ನೇ), ತೃಪ್ತಿ (6ನೇ)ತೋಟಗಾರಿಕಾ ಮಂತ್ರಿ: ಸೃಜನ್ (8ನೇ), ಅಭಿಷೇಕ್ (7ನೇ)ಕ್ರೀಡಾ ಮಂತ್ರಿ: ಇಶಾನ್ (8ನೇ), ಪ್ರಸನ್ನ (8ನೇ)ನೀರಾವರಿ ಮಂತ್ರಿ: ಶೃತಿಲ್ (7ನೇ), ಝುಹೈರ್ ಅಹ್ಮದ್ (6ನೇ)ಸ್ವಚ್ಛತಾ ಮಂತ್ರಿ: ಅಜಯ್ (8ನೇ), ವಂಶಿತ್ (6ನೇ), ಸಮರ್ಥ್ (7ನೇ)ವಾರ್ತಾ ಮಂತ್ರಿ: ಫಾತಿಮತ್ ಫಿದಾ (5ನೇ), ಬಿ. ಶ್ರೇಯಾ (6ನೇ)ಗ್ರಂಥಾಲಯ ಮಂತ್ರಿ: ಆರಾಧ್ಯಾ (7ನೇ), ಶಕುಂತಲ (6ನೇ)ಅಕ್ಷರ ದಾಸೋಹ ಮಂತ್ರಿ: ಚಿರಸ್ವಿ (8ನೇ), ರೀತಿಕಾ (7ನೇ)
ಪ್ರಮಾಣ ವಚನ ಸ್ವೀಕಾರ: ಈ ಚುನಾವಣೆ ಪ್ರಕ್ರಿಯೆಯನ್ನು ಶಾಲಾ ಸಹ ಶಿಕ್ಷಕಿಯರಾದ ವಸಂತಿ ಎನ್., ದೇವಿಬಾಯಿ ಡಿ. ಮತ್ತು ಬಿ. ಸುಶ್ಮಿತಾ ರಾವ್ ಅವರು ಯಶಸ್ವಿಯಾಗಿ ನಿರ್ವಹಿಸಿದರು. ಆಯ್ಕೆಯಾದ ನಾಯಕರಿಗೆ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ವಿಕ್ಟರ್ ಮೋಸ್ತಾ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಲು ಶುಭ ಹಾರೈಸಿದರು.









