







ಉಜಿರೆ: ಮಂಗಳೂರು ವಿಭಾಗಕ್ಕೆ ಸೇರಿದ ಕೆಎಸ್ಆರ್ಟಿಸಿ ಬಸ್ಸೊಂದು ತಾಂತ್ರಿಕ ದೋಷದಿಂದಾಗಿ ರಾಜ್ಯ ಹೆದ್ದಾರಿಯ ನಡುವೆಯೇ ಕೆಟ್ಟು ನಿಂತ ಪರಿಣಾಮ, ಇಂದು (ಜುಲೈ 1) ಬೆಳಿಗ್ಗೆ ವಾಹನ ಸವಾರರು ತೀವ್ರ ಸಂಚಾರ ದಟ್ಟಣೆಯಿಂದಾಗಿ ಪರದಾಡುವಂತಾಯಿತು.


ಉಜಿರೆಯ ಕಾಶಿಬೆಟ್ಟು ಪ್ರಗತಿ ನಗರದ ಮುಖ್ಯ ರಸ್ತೆಯ ಬಳಿ ಈ ಘಟನೆ ನಡೆದಿದೆ. ಹೆದ್ದಾರಿಯ ಮಧ್ಯಭಾಗದಲ್ಲಿಯೇ ಬಸ್ ಸ್ಥಗಿತಗೊಂಡಿದ್ದರಿಂದ, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಮಾರು ಒಂದು ಕಿಲೋಮೀಟರ್ಗೂ ಹೆಚ್ಚು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ತಲುಪಲಾಗದೆ ತೊಂದರೆ ಅನುಭವಿಸಿದರು.









