ಕಡಿರುದ್ಯಾವರ: ಕುಚ್ಚೂರುಬೈಲು ಶ್ರೀ ವನದುರ್ಗಾ ದೇವಸ್ಥಾನಕ್ಕೆ ರೂ. 50000 ದೇಣಿಗೆ

0

ಕಡಿರುದ್ಯಾವರ: ಕುಚ್ಚೂರುಬೈಲು ಶ್ರೀ ವನದುರ್ಗಾ ದೇವಸ್ಥಾನಕ್ಕೆ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ ಅನುವಂಶೀಯ ಆಡಳಿತ ಮೋಕ್ತೇಸರ, ದೇವಸ್ಥಾನದ ಟ್ರಸ್ಟ್ ನ ಗೌರವ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಅವರು ದೇವಸ್ಥಾನದ ಕಾಮಗಾರಿ ವೀಕ್ಷಿಸಲು ಜೂ. 28ರಂದು ಆಗಮಿಸಿ, ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ರೂ 50000/- ದೇಣಿಗೆ ನೀಡಿದರು.

ಆಷಾಡ ಮಾಸ ಕಳೆದ ಕೂಡಲೇ ಬ್ರಹ್ಮಕಲಶೋತ್ಸವಕ್ಕೆ ದಿನ ನಿಘಂಟು ಮಾಡುವಂತೆಯೂ ಮುಂದಿನ ಕಾಮಗಾರಿ ನಡೆಸುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಕಿರಣ್ ಹೆಬ್ಬಾರ್ ಸಿರಿಬೈಲು, ಹಾಗೂ ರಾಮಣ್ಣ ಗೌಡ ಮಂಜುನಾಥ ಟ್ರೇಡರ್ಸ್ ಉಜಿರೆ, ಟ್ರಸ್ಟ್ ನ ಅಧ್ಯಕ್ಷೆ ಅಧ್ಯಕ್ಷರು ಲೋಕೇಶ್ವರಿ ವಿನಯಚಂದ್ರ, ಕಾರ್ಯದರ್ಶಿ ಮಂಜುನಾಥ ಕುಚ್ಚೂರು ಕೋಶಾಧಿಕಾರಿ ಪ್ರಸಾದ್ ಗೌಡ ಕುಚ್ಚೂರು, ಸದಸ್ಯರು ಲೋಕೇಶ್ ಗೌಡ, ಧರ್ಣಪ್ಪ ಗೌಡ, ಶೆಟ್ಟಿಪಾಲು ಬಾಬು ನಾಯ್ಕ್, ಐತಪ್ಪ ಮಲೆಕುಡಿಯ, ಸೀತಾರಾಮ ಕೊಡಪಟ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ಮಂಜುನಾಥ್, ಕಾರ್ಯದರ್ಶಿ ನಳಿನಿ ಶ್ರೀಧರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here