






ಬೆಳ್ತಂಗಡಿ: ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಕೂದಲು ದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಸಿಂಗರ್ ರಮ್ಲಾನ್ ಅವರಿಗೆ ಯುವಶಕ್ತಿ ಸೇವಾಪಥ – ಹೇರ್ ವಿದ್ ಹಾರ್ಟ್ ವತಿಯಿಂದ ಪ್ರಶಂಸಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.


ಧರ್ಮಭೇದ ಮರೆತು ದೇವರ ಹಾಡುಗಳನ್ನು ಹಾಡುವ ರಮ್ಜಾನ್ ಅವರ ಕುರಿತು ಸುದ್ದಿ ನ್ಯೂಸ್ ವಿಶೇಷ ವರದಿ ಮಾಡಿತ್ತು. ಇದೀಗ ಅವರು ಕ್ಯಾನ್ಸರ್ ಚಿಕಿತ್ಸೆಯಿಂದ ಕೂದಲು ಕಳೆದುಕೊಂಡಿರುವ ರೋಗಿಗಳಿಗೆ ವಿಗ್ ತಯಾರಿಸಲು ಸಹಕಾರಿಯಾಗುವ ಉದ್ದೇಶದಿಂದ ಅವರು ಸ್ವಯಂಪ್ರೇರಿತರಾಗಿ ಕೂದಲು ದಾನ ಮಾಡಿ ಹೆಮ್ಮೆಗೆ ಪಾತ್ರರಾಗಿದ್ದಾರೆ. ಅವರ ಈ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಸಂಸ್ಥೆಯು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದೆ.









