






ಗೇರುಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಬೆಳ್ತಂಗಡಿ ವಲಯದ ಕಳಿಯ ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಲ್ಲಿ ಕರಾವಳಿ ಕಲಾ ತಂಡ ಮಂಗಳೂರು ಕಲಾವಿದರಿಂದ ಸ್ವಚ್ಚತೆ, ನೀರಿನ ಮಿತ ಬಳಕೆ, ಸ್ವಚ್ಚತೆ ಮಕ್ಕಳ ಶಿಕ್ಷಣ ಸ್ತನ ಕ್ಯಾನ್ಸರ್ ಹಾಗೂ ದುಶ್ಚಟದ ಬಗ್ಗೆ ಬೀದಿ ನಾಟಕ ಕಾರ್ಯಕ್ರಮದ ಮೂಲಕ ಉತ್ತಮ ಮಾಹಿತಿ ನೀಡಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ನೆರವೇರಿಸಿದರು. ತಾಲೂಕಿನ ಯೋಜನಾಧಿಕಾರಿ ಯಶೋಧರ, ಒಕ್ಕೂಟ ಅಧ್ಯಕ್ಷೆ ಶುಭಾಶಿನಿ, ಮತ್ತು ಶಾಲಿನಿಯವರು ಜ್ಞಾನ ವಿಕಾಸ ಸಂಯೋಜಕಿ ತಿಲೋತ್ತಮ ವಲಯ ಮೇಲ್ವಿಚಾರಕ ರವಿ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಸೌಮ್ಯ ಸ್ವಾಗತಿಸಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಧನ್ಯವಾದ ಸಲ್ಲಿಸಿದರು.









