ನೆಲ್ಯಾಡಿ: ಉದನೆ ವಲಯ ಮಟ್ಟದ ಮಾತೃಸಂಗಮ ‘ಫಿದೆಲಿಯುಂ–2026’

0

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಉದನೆ ವಲಯ ಮಟ್ಟದ ಮಾತೆಯರ ಒಕ್ಕೂಟದ ವಾರ್ಷಿಕ ಮಾತೃಸಂಗಮ ‘ಫಿದೆಲಿಯುಂ–2026’ ಕಾರ್ಯಕ್ರಮ ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ಜೂ.26ರಂದು ನಡೆಯಿತು.

ಕಾರ್ಯಕ್ರಮವನ್ನು ಫಾ. ಜೋಬಿ ಪುಲ್ಲಾಟ್ ಉದ್ಘಾಟಿಸಿ, ಉತ್ತಮ ಸಮಾಜ ಮತ್ತು ಕುಟುಂಬ ನಿರ್ಮಾಣದಲ್ಲಿ ಮಾತೆಯರ ಧಾರ್ಮಿಕ ಹಾಗೂ ಮೌಲ್ಯಾಧಾರಿತ ಪಾತ್ರದ ಮಹತ್ವವನ್ನು ಒತ್ತಿಹೇಳಿದರು. ಇಂದಿನ ಮಕ್ಕಳ ಬೆಳವಣಿಗೆಯಲ್ಲಿ ಮಾತೆಯರು ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಫಾ. ರಿಜೊ ಒಡೋಪಲ್ಲಿ, ಸಿಸ್ಟರ್ ಲಿಸ್ ಮ್ಯಾಥ್ಯೂ ಎಸ್.ಎಚ್., ರೇಖಾ ಅಡ್ಡಹೊಳೆ, ಸಿಮಿ ಆರ್ಲ, ಸುಜಾ ಜೇಮ್ಸ್ ಹಾಗೂ ಫಾ. ಶಾಜಿ ಮ್ಯಾಥ್ಯೂ ವಿವಿಧ ವಿಚಾರಗಳನ್ನು ಮಂಡಿಸಿದರು. ನೆಲ್ಯಾಡಿ, ಆರ್ಲ, ಇಚಿಲಂಪಾಡಿ, ಉದನೆ, ಶಿರಾಡಿ, ಅಡ್ಡಹೊಳೆ ಹಾಗೂ ಅರಸೀನಮಕ್ಕಿ ಚರ್ಚ್‌ಗಳ ಮಾತೆಯರು ಭಾಗವಹಿಸಿದರು. ಮಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here